ಉಡುಪಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂದಿಸಿದಂತೆ ನಾಮಪತ್ರ ಸಲ್ಲಿಕೆಯ ಐದನೇ ದಿನವಾದ ಇಂದು ಜಿಲ್ಲೆಯಲ್ಲಿ 13 ಜನ ಅಭ್ಯರ್ಥಿಗಳಿಂದ 18 ನಾಮಪತ್ರಗಳು ಸಲ್ಲಿಕೆಯಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ ( ಸೆಕ್ಯುಲರ್) ನಿಂದ ಮನ್ಸೂರ್ ಇಬ್ರಾಹಿಂ, ಪಕ್ಷೇತರರಾಗಿ ಚಂದ್ರ ಹರಿಜನ ,ಮಂಜುನಾಥ್ ಕೆ ನಾಮಪತ್ರ ಸಲ್ಲಿಸಿದ್ದರೆ. ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಾರ್ಟಿಯಿದ ಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ (ಕರ್ನಾಟಕ) ಅಭ್ಯರ್ಥಿಯಾಗಿ ಶೇಖರ್ ಹಾವಂಜೆ, ಜನತಾದಳ ( ಸೆಕ್ಯುಲರ್) ಪಕ್ಷದ ಅಭ್ಯರ್ಥಿ ದಕ್ಷತ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ಅಬ್ದುಲ್ ರಝಾಕ್ ಶಾಬನ್ ಅಹ್ಮದ್, ಪಕ್ಷೇತರ ಅಭ್ಯರ್ಥಿಯಗಿ ಅಬ್ದುಲ್ ರೆಹಮಾನ್ ನಾಮಪತ್ರ ಸಲ್ಲಿಸಿದ್ದಾರೆ. , ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಪಾರ್ಟಿ ವತಿಯಿಂದ ದಯಾನಂದ ಶೆಟ್ಟಿ, ಡೇನಿಯಲ್ ಫೆಡ್ರಿಕ್ ರೇಂಜರ್ , ಬಿ.ಜೆ.ಪಿ ಯಿಂದ ಮತ್ತೊಮ್ಮೆ ವಿ.ಸುನೀಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.