ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅಮೂಲಾಗ್ರ ಬದಲಾವಣೆ ಬೇಕಾಗಿದೆ – ಲೇಖನ

ರಾಘವೇಂದ್ರ ಪ್ರಭು, ಕವಾ೯ಲು
ಯುವ ಲೇಖಕ.

ನಮ್ಮ ದೇಶದಲ್ಲಿ ಹಲವಾರು ರಾಜ್ಯಗಳು ಕೇವಲ ಪ್ರವಾಸೋದ್ಯಮದಿಂದ ತನ್ನ ಜಿಡಿಪಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಸಫಲವಾಗಿದೆ. ಉದಾ :-, ಗೋವಾ ರಾಜ್ಯ ಶೇಕಡ 90ಕ್ಕಿಂತ ಹೆಚ್ಚು ಜಿಡಿಪಿ ಪ್ರವಾಸೋದ್ಯಮ ಕ್ಷೇತ್ರದಿಂದ ಬರುತ್ತಿದೆ.ಅಂದರೆ ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಸಮಾಜದ ಅಭಿವೃದ್ಧಿ ವೇಗ ಪಡೆಯಲು ಸಾಧ್ಯ ನಮ್ಮ ಉಡುಪಿ ಜಿಲ್ಲೆಯ ಬಗ್ಗೆ ಹೇಳುವುದಾದರೆ, ನಮ್ಮ ಜಿಲ್ಲೆಯಲ್ಲಿ ಹಲವಾರು ವೈವಿಧ್ಯತೆಗಳು ವಿಶಿಷ್ಟ ಆಚರಣೆಗಳು ಕಲಾ ಸಂಸ್ಕೃತಿಗಳು ಭಾಷೆ ವೈವಿಧ್ಯತೆಗಳು ಬಹುಶಃ ಯಾವ ಜಿಲ್ಲೆಯಲ್ಲಿ ನೋಡಲು ಅಸಾಧ್ಯ. ಆದರೆ ನಮ್ಮ ರಾಜಕೀಯ ಇಚ್ಚಾ ಶಕ್ತಿಯಿಂದ ಕೊರತೆಯಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಷ್ಟೊಂದು ಅಭಿವೃದ್ಧಿ ಆಗಿಲ್ಲ

ನಮ್ಮ ಜಿಲ್ಲೆಯಲ್ಲಿ ಶ್ರೀಕೃಷ್ಣ ಮಠ ಸೇರಿದಂತೆ ಹಲವಾರು ಧಾರ್ಮಿಕ ಸಾಂಸ್ಕೃತಿಕ ಮತ್ತು ಪರಿಸರದ ವೈವಿಧ್ಯದ ಸ್ಥಳಗಳಿಗೆ ಈ ಸ್ಥಳಗಳನ್ನು ಹುಡುಕಿಕೊಂಡು, ದೇಶವಿದೇಶದ ಬಹಳಷ್ಟು ಪ್ರವಾಸಿಗರು ನಮ್ಮಲ್ಲಿ ಬರುತ್ತಿದ್ದಾರೆ. ಈಗಾಗಲೇ ನಾವು ನೋಡಿದಂತೆ ಉಡುಪಿ ಜಿಲ್ಲೆಗೆ ಸರಿಸುಮಾರು ದಿನಂಪ್ರತಿ ಒಂದು ಲಕ್ಷ ಜನ ಪ್ರವಾಸಿಗರು ಬರುತ್ತಿದ್ದಾರೆ ಆದರೆ ಹೆಚ್ಚಿನ ಜನರು ಬೇರೆ ಕ್ಷೇತ್ರಗಳಿಗೆ ಹೋಗುವಾಗ ಈ ಸ್ಥಳಗಳನ್ನು ನೋಡಿಕೊಂಡು ಹೋಗುತ್ತಿದ್ದಾರೆ ನಮ್ಮಲ್ಲಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದ್ದಲ್ಲಿ ಖಂಡಿತವಾಗಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾದ್ಯ.

ರಾಜಕೀಯ ಇಚ್ಛಾಶಕ್ತಿ ಬೇಕಾಗಿದೆ :-
ನಮ್ಮ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗುವಲ್ಲಿ ನಮ್ಮ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿ ವರ್ಗ ತಮ್ಮ ಇಚ್ಛಾಶಕ್ತಿಯನ್ನು ತೋರ್ಪಡಿಸಬೇಕಾಗಿದೆ.ಮುಖ್ಯವಾಗಿ ಈ ಕ್ಷೇತ್ರಗಳ ಅಭಿವೃದ್ಧಿಗಾಗಿ ನೀಲಿ ನಕಾಶೆಯನ್ನು ರೂಪಿಸಿಕೊಂಡು, ಈ ಮೂಲಕವಾಗಿ ಅಭಿವೃದ್ಧಿಯ ವೇಗ ಹೆಚ್ಚಿಸಬೇಕಾಗಿದೆ ಈಗಾಗಲೇ ಪಡುಬಿದ್ರೆಯ ಕಡಲತೀರಕ್ಕೆ , ಬ್ಲೂ ಫ್ಲಾಗ್ ಬೀಚ್ ಮಾನ್ಯತೆ ಸಿಕ್ಕಿರುವುದು ಸಂತೋಷದ ವಿಷಯ. ಅಲ್ಲದೆ ಕಾಪು ಮಲ್ಪೆ , ಹೂಡೆ ಬೀಚ್ ಗಳಿಗೆ ಬ್ಲೂ ಫ್ಲಾಗ್ ಮಾನ್ಯತೆ, ದೊರಕುವಲ್ಲಿ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ .ನಮ್ಮಲ್ಲಿ ಬಹಳಷ್ಟು ಸ್ಥಳಗಳು ಇತಿಹಾಸ ಪ್ರಸಿದ್ಧ ಕೂಡ ಆಗಿದೆ .ಉದಾಹರಣೆಗಾಗಿ ಬಾರ್ಕೂರು ಉದ್ಯಾವರ ಮುಂತಾದ ಕ್ಷೇತ್ರಗಳು ಐತಿಹಾಸಿಕ ಆಗಿ ಮಾನ್ಯತೆ ಪಡೆದಿದೆ ಈ ನಿಟ್ಟಿನಲ್ಲಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಆದಲ್ಲಿ ಬಹಳಷ್ಟು ಜನರಿಗೆ ಉದ್ಯೋಗ ಸಿಗೋದಲ್ಲದೆ ಆರ್ಥಿಕವಾಗಿಯೂ ಅಭಿವೃದ್ಧಿ ಸಾಧ್ಯ ಅಲ್ಲದೆ ಪ್ರವಾಸೋದ್ಯಮ ಕೂಡ ಬಲಗೊಳ್ಳಲು ಸಾಧ್ಯ.

ಮೂಲಭೂತ ಸೌಕಯ೯ಗಳಿಗೆ ಆದ್ಯತೆ ಸಿಗಲಿ :-
ಹೆಚ್ಚಿನ ನಮ್ಮ ಪ್ರವಾಸೋದ್ಯಮ ಕ್ಷೇತ್ರ ಹಿನ್ನಡೆ ಆಗಲು ಮುಖ್ಯವಾಗಿ ಸರಿಯಾದ ರಸ್ತೆ ಸೇರಿದಂತೆ ಮೂಲಭೂತ ಸೌಕಯ೯ಗಳಿಗೆ ಗಮನ ನೀಡದ ಪರಿಣಾಮ ಪ್ರವಾಸಿಗರು ಬರಲು ಹಿನ್ನಡೆಯಾಗಿದೆ. ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಲಿ.

ಸಂತೋಷದ ವಿಷಯವೆಂದರೆ ಕಳೆದ 3-4 ತಿಂಗಳಿನಿಂದ ಹಲವಾರು ಅಭಿವೃದ್ಧಿ ನಡೆಯುತ್ತಿದೆ. ಕಾಕ೯ಳದಲ್ಲಿ ಈ ಬಗ್ಗೆ ಹೆಚ್ಚಿನ ಪ್ರವಾಸೋದ್ಯಮ ನಿಟ್ಟಿನಿಲ್ಲಿ ಅಭಿವೃದ್ಧಿ ನಡೆಯುತ್ತಿದೆ.

ನಮ್ಮ ಜಿಲ್ಲೆಯ ಪ್ರವಾಸೋದ್ಯಮ ನಿಟ್ಟಿನಲ್ಲಿ ಕೆಲವು ಪ್ರಮುಖ ಅಂಶಗಳು :-
‘ ಪ್ರವಾಸಿ ಸ್ಥಳಗಳಲ್ಲಿ ಮಾಹಿತಿ ಕೇಂದ್ರ ಸೇರಿದಂತೆ ಪ್ರವಾಸಿಗರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಕ್ರಮ ವಹಿಸುವುದು.

ಪ್ರವಾಸಿಗರಿಗೆ ಉತ್ತಮವಾದ ವಸತಿ, ಹೊಟೇಲ್ ವ್ಯವಸ್ಥೆ ಅಭಿವೃದ್ಧಿಗೊಳಿಸುವುದು
.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಸಿಗುವಲ್ಲಿ ಸಾಮಾಜಿಕ ಜಾಲ ತಾಣ ಗಳ ಬಳಕೆ.

ಬಜೆಟ್ ನಲ್ಲಿ ಹೆಚ್ಚಿನ ಹಣಕಾಸು ವ್ಯವಸ್ಥೆ ಮಾಡುವುದು.

ಪ್ರವಾಸಿ ಸ್ಥಳಗಳ ಸೂಕ್ತವಾದ ನಿವ೯ಹಣೆಗೆ ಕ್ರಮ ತೆಗೆದುಕೊಳ್ಳುವುದು.

ಗ್ರಾಮೀಣ ಭಾಗದಲ್ಲಿ ಪ್ರವಾಸಿ ಸ್ವಳ ಗಳ ಅಭಿವೃದ್ಧಿ’

ಕೇಂದ್ರ ಮತ್ತು ರಾಜ್ಯ ಸಕಾ೯ರ ಸೇರಿದಂತೆ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸಿ ಸ್ಥಳಗಳ ಸಮಗ್ರ ಅಭಿವೃದಿಗೊಳಿಸುವುದು.

ಇಲ್ಲಿನ ವಿಶೇಷ ಆಕಷ೯ಣಿಯಾದ ಕುದ್ರ ದ್ವೀಪಗಳ ರಕ್ಷಣೆಗೆ ಒತ್ತು ನೀಡುವುದು.

ಧಾಮಿ೯ಕ ಸ್ಥಳಗಳಲ್ಲಿ ಊಟ ಉಪಹಾರ ಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

ಒಟ್ಟಾಗಿ ಪ್ರವಾಸೋದ್ಯಮ ಕ್ಷೇತ್ರ ಸಮಾಜದ ಅಭಿವೃದ್ಧಿ ಸಾಧ್ಯ’

Latest Indian news

Popular Stories