ಉಡುಪಿ: ಜುಲೈ ಒಳಗೆ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ವಿತರಣೆ

ಉಡುಪಿ: ಶಾಲಾರಂಭದ ಮೊದಲ ದಿನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು 2023-24ನೇ ಶೈಕ್ಷಣಿಕ ಸಾಲಿಗೆ ಸರಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ 1 ಜತೆ ಶೂ ಮತ್ತು 2 ಜತೆ ಸಾಕ್ಸ್‌ ಜುಲೈ ತಿಂಗಳ ಒಳಗೆ ಲಭ್ಯವಾಗಲಿದೆ.

ಆಯಾ ಶಾಲೆಗಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ)ಗಳಿಗೆ ಉಚಿತ ಶೂ ಹಾಗೂ ಸಾಕ್ಸ್‌ಗಳನ್ನು ವಿತರಿಸುವ ಹೊಣೆ ಇಲಾಖೆ ನೀಡಲಾಗಿದೆ. ಒಂದು ಜತೆ ಕಪ್ಪು ಬಣದ ಶೂ ಹಾಗೂ ಎರಡು ಜತೆ ಬಿಳಿ ಬಣ್ಣದ ಸಾಕ್ಸ್‌ಗಳನ್ನು ಖರೀದಿಸಿ ವಿತರಿಸುವಂತೆ ಇಲಾಖೆ ಸೂಚನೆ ನೀಡಿದೆ.

ಆಯಾ ಶಾಲೆಗಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ)ಗಳಿಗೆ ಉಚಿತ ಶೂ ಹಾಗೂ ಸಾಕ್ಸ್‌ಗಳನ್ನು ವಿತರಿಸುವ ಹೊಣೆ ಇಲಾಖೆ ನೀಡಲಾಗಿದೆ. ಒಂದು ಜತೆ ಕಪ್ಪು ಬಣದ ಶೂ ಹಾಗೂ ಎರಡು ಜತೆ ಬಿಳಿ ಬಣ್ಣದ ಸಾಕ್ಸ್‌ಗಳನ್ನು ಖರೀದಿಸಿ ವಿತರಿಸುವಂತೆ ಇಲಾಖೆ ಸೂಚನೆ ನೀಡಿದೆ.

ಖರೀದಿಗೆ ಸಮಿತಿ
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ವಿತರಿಸಲು “ಪಾದರಕ್ಷೆ’ ಸಮಿತಿ ರಚಿಸಲಾಗಿದೆ. ಶಾಲಾ ಹಂತದಲ್ಲಿ ಶಿಕ್ಷಣ ಇಲಾಖೆ ಆಯಾ ಶಾಲೆಗಳ ಎಸ್‌ಡಿಎಂಸಿ ಸಮಿತಿಗಳ ಮೇಲುಸ್ತುವಾರಿಯಲ್ಲಿ ಖರೀದಿ ಪ್ರಕ್ರಿಯೆಗೆ ಅನುಕೂಲವಾಗುವಂತೆ ಪಾದರಕ್ಷೆ ಸಮಿತಿ ರಚಿಸಿದೆ. ಎಸ್‌ಡಿಎಂಸಿ ಅಧ್ಯಕ್ಷರೇ ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ, ಶಾಲೆಯ ಮುಖ್ಯ ಶಿಕ್ಷಕರು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ. ಎಸ್‌ಡಿಎಂಎಸಿ ನಾಮ ನಿರ್ದೇಶಿತ ಮೂವರು ಸದಸ್ಯರು(ಇಬ್ಬರು ಮಹಿಳೆಯರು) ಸಮಿತಿ ಸದಸ್ಯರಾಗಿ ಸಮಿತಿಯಲ್ಲಿ ಕಾರ್ಯನಿರ್ವಹಿಸಬೇಕು.

ಜಂಟಿ ಖಾತೆಗೆ ಅನುದಾನ
1 ರಿಂದ 8ನೇ ತರಗತಿ ಓದುತ್ತಿರುವ ಮಕ್ಕಳಿಗೆ ಮಾತ್ರ ಜು. 30 ರೊಳಗೆ ಶೂ ಹಾಗೂ ಸಾಕ್ಸ್‌ಗಳನ್ನು ವಿತರಿಸಲು ಇಲಾಖೆ ಸೂಚಿಸಿದ್ದು, ಇದಕ್ಕೆ ಸಂಬಂಧಿಸಿದ ಅನುದಾನ ಎಸ್‌ಡಿಎಂಸಿ ಹಾಗೂ ಶಾಲೆಯ ಜಂಟಿ ಖಾತೆಗೆ ನೇರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. 9 ರಿಂದ 10ನೇ ತರಗತಿಯ ಮಕ್ಕಳಿಗೆ ಆಯಾ ಪ್ರೌಢ ಶಾಲಾ ಮುಖ್ಯ ಶಿಕ್ಷಕರೇ ಡಿಡಿಒಗಳಾಗಿರುವುದರಿಂದ ಅನುದಾನವನ್ನು ನೇರವಾಗಿ ಅವರಿಗೆ ಬಿಡುಗಡೆ ಮಾಡಲು ಡಿಡಿಒ ಕೋಡ್‌ಗಳನ್ನು ಕೆ-2ನಲ್ಲಿ ಮ್ಯಾಪಿಂಗ್‌ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಅನಂತರ ಡಿಡಿಒಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇವುಗಳ ಖರೀದಿಗಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

56 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು
ಜಿಲ್ಲೆಯ ಸರಕಾರಿ ಶಾಲೆಯ 1ನೇ ತರಗತಿಯಲ್ಲಿ 4348, 2ನೇ ತರಗತಿಯಲ್ಲಿ 5,721,3ನೇ ತರಗತಿಯಲ್ಲಿ 6,383, 4ನೇ ತರಗತಿಯಲ್ಲಿ 6,123, 5ನೇ ತರಗತಿಯಲ್ಲಿ 6,015, 6ನೇ ತರಗತಿಯಲ್ಲಿ 4,798, 7ನೇ ತರಗತಿಯಲ್ಲಿ 5,956, 8ನೇ ತರಗತಿಯಲ್ಲಿ 5,147, 9ನೇ ತರಗತಿ ಯಲ್ಲಿ 5,840 ಹಾಗೂ 10ನೇ ತರಗತಿಯಲ್ಲಿ 5,896 ಸೇರಿದಂತೆ 1ರಿಂದ 6ನೇ ತರಗತಿಯಲ್ಲಿ 56,227 ವಿದ್ಯಾರ್ಥಿಗಳಿದ್ದಾರೆ. (ಈ ವರ್ಷ 1ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಹೆಚ್ಚುವರಿ ಮಾಹಿತಿ ಇದರಲ್ಲಿ ಸೇರಿಕೊಂಡಿಲ್ಲ)

Latest Indian news

Popular Stories