ಉಡುಪಿ, ಡಿ.14: ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಸಂಜೆ ಕ್ಲಿನಿಕ್ ಸೇವೆಗಳು ಜ.16ರಿಂದ ಜಾರಿಗೆ ಬರಲಿದೆ.
ಸಂಜೆ ಕ್ಲಿನಿಕ್‌ಗಳು ಎಲ್ಲಾ ಕೆಲಸದ ದಿನಗಳಲ್ಲಿ ಸಂಜೆ 5ರಿಂದ 7ಗಂಟೆಯ ವರೆಗೆ ಕಾರ್ಯನಿರ್ವಹಿಸುತ್ತವೆ. ಸೇವೆಯ ವಿಸ್ತೃತ ಸಮಯದಲ್ಲಿ ಸಮು ದಾಯದ ಆರೋಗ್ಯ ಅಗತ್ಯಗಳಿಗಾಗಿ ವೈದ್ಯರು ಸಂಜೆ ಕೂಡ ಸಮಾಲೋಚನೆ ಗಾಗಿ ಲಭ್ಯ ಇರುತ್ತಾರೆ. 5ರಿಂದ 7ರವರೆಗೆ ಸೇವೆಗಳ ವಿಸ್ತರಣೆಯು ಎಕ್ಸ್-ರೇ, ಪ್ರಯೋಗಾಲಯ ಮತ್ತು ಔಷಧಾಲಯ ಸೇವೆಗಳನ್ನು ಸಹಾ ಒಳಗೊಂಡಿರುತ್ತದೆ.
ಮಣಿಪಾಲ್ ಆರೋಗ್ಯ ಕಾರ್ಡ್ ಮತ್ತು ಇತರ ರಿಯಾಯಿತಿ ಯೋಜನೆಗಳು ಸಮಾಲೋಚನೆ ಸೇವೆಗಳಿಗೆ ಅನ್ವಯಿಸುವುದಿಲ್ಲವಾದರೂ, ಅವು ಇತರ ಎಲ್ಲಾ ಸೇವೆಗಳಿಗೆ ಅನ್ವಯಿಸುತ್ತವೆ. ಸಂಜೆ ಕ್ಲಿನಿಕ್‌ಗಳಿಂದ ಕೆಲಸದಲ್ಲಿರುವ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಇತರರು ಆಸ್ಪತ್ರೆಗೆ ಭೇಟಿ ನೀಡಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯುವುದು ಸುಲಭವಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ತಿಳಿಸಿದ್ದಾರೆ.