ದಿ ಹಿಂದುಸ್ತಾನ್ ಗಝೆಟ್ (ವಿಶೇಷ ವರದಿ)
ಉಡುಪಿ: ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪಡುಕುದ್ರು-ತಿಮ್ಮಣ್ಣ ಕುದ್ರು ನಡುವಿನ ಸಂಪರ್ಕ ಕೊಂಡಿಯಾಗಿದ್ದ ತೂಗು ಸೇತುವೆ ಇದೀಗ ಪ್ರವಾಸಿಗರ ಆಕರ್ಷಣೀಯ ಸ್ಥಳ. ಪ್ರತಿ ದಿನ ಈ ತೂಗು ಸೇತುವೆ ವೀಕ್ಷಿಸಲು ದೂರದ ಊರುಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿ ಕಾಯಕಿನ್ ದೋಣಿಗಳು ಕೂಡ ಇರುವುದರಿಂದ ಇದೀಗ ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಬೆಳೆದಿದೆ.
ಗುಜರಾತಿನ ಮೋರ್ಬಿಯಲ್ಲಿ ನಡೆದ ತೂಗು ಸೇತುವೆ ದುರಂತದ ನಂತರ ಈ ತೂಗು ಸೇತುವೆ ಹೆಚ್ಚು ಚರ್ಚೆಗೆ ಒಳಗಾಗಿತ್ತು. ಸಾಮರ್ಥ್ಯಕ್ಕಿಂತ ಹೆಚ್ಚು ಮಂದಿ ಪ್ರವಾಸಿಗರು ಈ ತೂಗು ಸೇತುವೆ ಮೇಲೆ ನಿಲ್ಲುವುದು ಕಂಡು ಬಂದ ಹಿನ್ನಲೆಯಲ್ಲಿ ಇದರ ದುರಸ್ತಿ ಅಗತ್ಯ ಎಂಬ ಕೂಗು ಕೂಡ ಕೇಳಿ ಬಂದಿತು. ಜಿಲ್ಲಾಡಳಿತ ಕೂಡ ಈ ಕುರಿತು ಮಾಧ್ಯಮ ವರದಿಗಳಿಂದ ಎಚ್ಚೆತ್ತು ಪರಿಶೀಲನೆ ನಡೆಸಿ ಸರಕಾರಕ್ಕೆ ದುರಸ್ತಿಯ ಪ್ರಸ್ತಾಪವನ್ನು ಮಾಡಿದೆ.
ಆದರೆ ಇದೀಗ ಅಪಾಯ ಅರಿತ ತೋನ್ಸೆ ಗ್ರಾಮ ಪಂಚಾಯತ್ ತೂಗು ಸೇತುವೆ ಪ್ರವೇಶ ಸ್ಥಳಕ್ಕೆ ತಾತ್ಕಲಿಕವಾಗಿ ತೂಗು ಸೇತುವೆ ಬಂದ್ ಮಾಡಿರುವ ಕುರಿತು ಉಲ್ಲೇಖಿಸಿದೆ. ತೋನ್ಸೆ ಪಂಚಾಯತ್ ಸದಸ್ಯರ ಸಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಈ ತಾತ್ಕಲಿಕ ನಿರ್ಬಂಧ ಶಾಶ್ವತ ನಿರ್ಬಂಧವಾಗಿ ಮುಂದುವರಿದರೆ ಅಥವಾ ದೀರ್ಘ ಸಮಯ ತಗುಲಿದರೆ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಅದರಲ್ಲೂ ಅದನ್ನು ನಂಬಿ ಅಂಗಡಿ ಮುಗ್ಗಟ್ಟುಗಳನ್ನು ಇಟ್ಟಿರುವ ವ್ಯಾಪಾರಸ್ಥರಿಗೂ ಸಮಸ್ಯೆಯಾಗಲಿದೆ. ಬಂಡವಾಳ ಹೂಡಿ ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆದು ಕಯಾಕಿನ್ ಬೋಟ್ ನಡೆಸುತ್ತಿರುವ ಮಾಲಿಕರಿಗೂ ನಷ್ಟ ಉಂಟಾಗಲಿದೆ. ಇದೀಗ ತಿಮ್ಮಣ್ಣ ಕುದ್ರು ಜನರಿಗೆ ಪೇಟೆ ಸಂದಿಸಲು ವಾಹನ ಹೋಗ ಬಲ್ಲ ಸೇತುವೆ ಇದ್ದರೂ ಪಾದಚಾರಿಗಳಿಗೆ ಈ ಸೇತುವೆ ಬಹಳಷ್ಟು ಸಮೀಪದಲ್ಲಿ ಸಂಪರ್ಕ ಕಲ್ಪಿಸುವುದರಿಂದ ಅವರಿಗೂ ಸಮಸ್ಯೆ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರಕಾರ ದುರಂತ ನಡೆದಾಗ ಆಶ್ವಾಸನೆ ನೀಡಿ ನಂತರ ನಿರ್ಲಕ್ಷ್ಯ ವಹಿಸುವುದು ಸೂಕ್ತವಲ್ಲ. ಆದಷ್ಟು ಶೀಘ್ರವಾಗಿ ಇದರ ದುರಸ್ತಿ ಕಾರ್ಯ ಕೈಗೊಂಡರೆ ಪ್ರವಾಸೋದ್ಯಮಕ್ಕೂ, ಸ್ಥಳೀಯರಿಗೂ ಲಾಭವಾಗಲಿದೆ ಎಂಬುವುದು ಅಲ್ಲಿನ ಜನರ ವಾದ.
ಸಡಿಲಗೊಂಡಿರುವ ನದಿಯ ಇಕ್ಕೆಲಗಳು:
ನಿರಂತರವಾಗಿ ನದಿಯ ಕೊರೆತದ ಕಾರಣ ದಡದ ಇಕ್ಕೆಲಗಳು ಸವಕಳಿಗೆ ಒಳಗಾಗಿದ್ದು ಇದರ ಕುರಿತು ಕೂಡ ಸರ್ಕಾರ ಗಮನ ಹರಿಸಿ ಕಲ್ಲಿನ ತಡೆಗೋಡೆ ನಿರ್ಮಿಸುವ ಅಗತ್ಯವಿದೆ.
ವ