ಉಡುಪಿ ನಗರಸಭೆಯ ಪೌರಾಯುಕ್ತರಾಗಿ ರಮೇಶ್ ಪಿ ನಾಯ್ಕ್ ನಿಯೋಜನೆ

ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಶೆಟ್ಟಿ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಪೌರಾಯುಕ್ತರಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಅವರಿಂದ ತೆರವಾದ ಉಡುಪಿ ನಗರಸಭೆಯ ಸ್ಥಾನಕ್ಕೆ ಕಾರವಾರ ನಗರ ಸಭೆ ಪೌರಾಯುಕ್ತರಾಗಿದ್ದ ರಮೇಶ್ ಪಿ ನಾಯ್ಕ ಅವರನ್ನು ನಿಯೋಜಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Latest Indian news

Popular Stories