ಉಡುಪಿ: ವಾಹನವೊಂದು ಪಾದಚಾರಿಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ ನಿಟ್ಟೂರು ಹುಂಡೈ ಶೋ ರೂಮ್ ಬಳಿ ಜು. 23ರ ರವಿವಾರ ರಾತ್ರಿ 10.30ರ ಸಮಯ ನಡೆದಿದೆ.
ವ್ಯಕ್ತಿಯು ಸ್ಥಳೀಯ ನಿವಾಸಿ ರಮೇಶ್ ಪೂಜಾರಿ (60ವರ್ಷ) ಎಂದು ತಿಳಿದು ಬಂದಿದೆ.
ಅಪಘಾತಕ್ಕೆ ಒಳಗಾದ ವ್ಯಕ್ತಿಯ ಹೊಟ್ಟೆ ಹಾಗೂ ಕೈಗಳು ಛಿದ್ರವಾಗಿ ಮೃತಪಟ್ಟಿದ್ದಾರೆ.
ಅಪಘಾತವಾದ ಕೂಡಲೇ ವಿಶು ಶೆಟ್ಟಿಯವರಿಗೆ ಮಾಹಿತಿ ಲಭಿಸಿದ್ದು, ಕೂಡಲೇ 108 ಆಂಬುಲೆನ್ಸ್ ಸ್ಥಳಕ್ಕೆ ಕಳುಹಿಸಿ ಅಲ್ಲಿದ್ದ ಸಾರ್ವಜನಿಕರ ಸಹಾಯದಿಂದ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.