ಉಡುಪಿ: ಗುರು ಶಿಷ್ಯ ಕಾಳಗ ಕೊನೆಗೊಳ್ಳುತ್ತಿಲ್ಲ. ಪ್ರಮೋದ್ ಮುತಾಲಿಕ್ ವಿರುದ್ಧ ಸುನೀಲ್ ಕುಮಾರ್ ಕಿಡಿ ಕಾರಿದ್ದಾರೆ.
ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಇಂಧನ ಸಚಿವ ಸುನಿಲ್ ಕುಮಾರ್ ಪ್ರಯಾಸದ ಗೆಲುವು ದಾಖಲಿಸಿದ್ದಾರೆ.ಸುನಿಲ್ ಕುಮಾರ್ 2018 ರಲ್ಲಿ 40 ಸಾವಿರ ಮತಗಳಿಂದ ಗೆದ್ದಿದ್ದರೆ ಈ ಬಾರಿ ಕೇವಲ 4
ಸಾವಿರ ಓಟಿನಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದ್ದಾರೆ.ಇದರಿಂದ
ಕೆರಳಿ ಕೆಂಡಾಮಂಡಲವಾಗಿರುವ ಸುನಿಲ್ ಕುಮಾರ್ ,ಮುತಾಲಿಕ್ ರನ್ನು ಒಬ್ಬ ಡೀಲ್ ಮಾಸ್ಟರ್ ಎಂದು ಜರೆದಿದ್ದಾರೆ ,ಮಾತ್ರವಲ್ಲ ಮುಂದಿನ ದಿನಗಳಲ್ಲಿ ಮುತಾಲಿಕ್ ಗೆ ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ.
ಸುನಿಲ್ ವಿರುದ್ಧ ಕಾರ್ಕಳ ಕ್ಷೇತ್ರದಲ್ಲಿ ಮುತಾಲಿಕ್ ಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದರು. ಕಾಂಗ್ರೆಸ್ ನ ಪ್ರತಿಸ್ಪರ್ಧಿ ಮುನಿಯಾಲು ಉದಯ ಶೆಟ್ಟಿ 4 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಪ್ರಯಾಸದ ಗೆಲುವಿನ ಬಳಿಕ ಸುನಿಲ್ ಕುಮಾರ್ ಕೆಂಡಾಮಂಡಲವಾಗಿದ್ದು ,ಮುತಾಲಿಕ್ ಬಿ ಟೀಮ್
ನವರು.ಹಿಂದೆ ಜೋಶಿ ಮತ್ತು ಅನಂತಕುಮಾರ್
ವಿರುದ್ಧ ಸ್ಪರ್ಧಿಸಿದ್ದರು.ಈ ಬಾರಿ ನನ್ನ ವಿರುದ್ಧ
ಸ್ಪರ್ಧಿಸಿದ್ದಾರೆ.ಮುತಾಲಿಕ್ ನೈಜ ಹಿಂದುತ್ವ ಏನು
ಎಂಬುದು ಗೊತ್ತಿದೆ.ಅವರು ಕಾಂಗ್ರೆಸ್ ನವರ ಜೊತೆ ಡೀಲ್
ಮಾಡಿಕೊಂಡಿದ್ದಾರೆ.ಅವರೊಬ್ಬ ಬಹುದೊಡ್ಡ ಡೀಲ್
ಮಾಸ್ಟರ್ ಎಂದು ಹೇಳಿರುವ ವೀಡಿಯೋ ವೈರಲಾಗಿದೆ.