ಉಡುಪಿ: ಮತಗಟ್ಟೆಗಳ ಪರಿಶೀಲನೆಗೆ ಇಂದು ತೆರಳಿದ್ದ ಉಡುಪಿ ಡಿಸಿ ಹಾಗೂ ಎಸ್ಪಿ ರಾತ್ರಿ ಮತಗಟ್ಟೆಯಲ್ಲಿಯೇ ಭೋಜನ ಸವಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಬೈಲೂರು ಮತಗಟ್ಟೆಗೆ ತೆರಳಿದ ಜಿಲ್ಲಾಧಿಕಾರಿ ಕೂರ್ಮರಾವ್ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೆ, ನಾಳೆ ನಡೆಯಲಿರುವ ಮತದಾನದ ಪ್ರಯುಕ್ತ ಮತಗಟ್ಟೆಗಳಲ್ಲಿ ಕರ್ತ್ಯವ್ಯಕ್ಕೆ ತೆರಳಿರುವ ಸಿಬ್ಬಂದಿಗೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವ ಬಗ್ಗೆ ಹಾಗು ಸುಗಮ ಮತದಾನಕ್ಕಾಗಿ ಮತಗಟ್ಟೆಗಳಲ್ಲಿ ಕೈಗೊಂಡಿರುವ ಎಲ್ಲಾ ಸಿದ್ದಾತಾ ಕ್ರಮಗಳನ್ನು ಪರಿಶೀಲಿಸಿದರು.
ಬಳಿಕ ಅವರು ಮತಗಟ್ಟೆಯ ಸಿಬ್ಬಂದಿಗಳೊಂದಿಗೆ ಮತಗಟ್ಟೆಯಲ್ಲೇ ಭೋಜನ ಸವಿದರು.