ಸಾಂದರ್ಭಿಕ ಚಿತ್ರ:
ಉಡುಪಿ: ಉಡುಪಿ ನಗರ ಪೊಲೀಸ್ ಠಾಣೆಗಳ ಆವರಣಗಳಲ್ಲಿ ಜಪ್ತಿಪಡಿಸಿಕೊಂಡು ನಿಲ್ಲಿಸಿರುವ ಕೆ.ಎ ೨೦ ಎಂ.೫೨ ಬಿಳಿ ಬಣ್ಣದ ಪಿಯೆಟ್ ಪದ್ಮಿನಿ ಕಾರು, ಕೆ.ಎ ೧೯ ಏಸ್ ೭೮೬೬ ಯುನಿಕಾರ್ನ್ ಬೈಕ್, ಕೆ.ಎ ೦೯ ಝಡ್ ೫೨೫೨ ಮಾಟಿಜ್‌ಕಾರು, ಕೆ.ಎ ೧೩ ಎಮ್ ೪೪೩ ಮಾರುತಿಜೆನ್‌ಕಾರು, ಕೆ.ಎ ೨೯ ಕ್ಯೂ ೯೩೪೧ ಬಜಾಜ್‌ಎಕ್ಸಿಡ್ ಮೋಟಾರ್ ಸೈಕಲ್, ಕೆ.ಎ ೨೦ ೫೮೯೭ ಆಟೋರಿಕ್ಷಾ, ಕೆ.ಎ ೧೯ ಇ.ಬಿ ೪೦೯೬ ಮತ್ತು ಕೆ.ಎ ೨೦ ಕ್ಯೂ ೧೪೫೬ ಮೋಟಾರ್ ಸೈಕಲ್ ವಾಹನಗಳ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡರೂ ಅದರ ಮಾಲೀಕರು ವಾಹನವನ್ನು ಬಿಡಿಸಿಕೊಂಡು ಹೋಗಿರುವುದಿಲ್ಲ. ಆದ್ದರಿಂದ ಪ್ರಕಟಣೆಯ ದಿನಾಂಕದಿAದಒAದು ವಾರದ ಒಳಗೆ ವಾಹನಗಳ ಮಾಲಕರು ನ್ಯಾಯಾಲಯದಲ್ಲಿ ವ್ಯವಹರಿಸಿ, ತಮ್ಮ ವಾಹನಗಳನ್ನು ಠಾಣೆಯಿಂದ ಬಿಡಿಸಿಕೊಂಡು ಹೋಗಬೇಕು, ತಪ್ಪಿದ್ದಲ್ಲಿ ನ್ಯಾಯಾಲಯದಅನುಮತಿ ಪಡೆದು ವಾಹನಗಳನ್ನು ಬಹಿರಂಗ ಹರಾಜು ಮಾಡಲಾಗುವುದುಎಂದುಉಡುಪಿ ನಗರ ಪೊಲೀಸ್‌ಠಾಣಾ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.೨-೩ ರಂದು ವಿದ್ಯುತ್ ವ್ಯತ್ಯಯ
ಉಡುಪಿ: ೩೩/೧೧ಕೆ. ವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ ೫ ಎಂ.ವಿ.ಎ ಪರಿವರ್ತಕವನ್ನು೧೨.೫ಎಂ.ವಿ.ಎ ಪರಿವರ್ತಕದಿಂದ ಬದಲಾಯಿಸುವಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ, ಸದರಿಉಪಕೇಂದ್ರದಿAದ ಹೊರಡುವಎಲ್ಲಾ ೧೧ಕೆ.ವಿ ಫೀಡರ್ ಮಾರ್ಗದಲ್ಲಿ ಉಳಿಯಾರಗೋಳಿ, ಬಂಟಕಲ್ಲು, ಮೂಡಬೆಟ್ಟು, ಪಾಂಗಳ, ಶಿರ್ವ ಹಾಗೂ ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಮಟ್ಟಾರು, ಪದವು, ಪಾಂಬೂರು, ಪಿಲಾರು ಖಾನ, ಪೆರ್ನಾಲು, ಕುತ್ಯಾರು, ಪುಂಚಲಕಾಡು, ಕಳತ್ತೂರು, ಚಂದ್ರನಗರ, ಮಲ್ಲಾರು, ಪೊಲಿಪು, ಕೊಪ್ಪಲಂಗಡಿ, ಪಣಿಯೂರು, ಕಾಪು ಬಡಾಗ್ರಾಮ(ಉಚ್ಚಿಲ), ಮೂಳೂರು, ಬೆಳಪು, ಮಲ್ಲಾರು, ಅಬ್ಬೇಡಿ, ಪಾದೂರುಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೆಬ್ರವರಿ ೨ ಮತ್ತು ೩ ರಂದು ಬೆಳಗ್ಗೆ ೯ ರಿಂದ ಸಂಜೆ ೫ ರ ವರೆಗೆ ನಿರಂತರವಾಗಿಲ್ಲದAತೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯಉಂಟಾಗಲಿದೆಎAದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.