ಉಡುಪಿ: ವಿಧಿಯ ಆಟ ಎಂಥ ಘೋರ, ಒಂದೇ ದಿನ ಸಂಗೀತದ ಸ್ವರ ನಿಲ್ಲಿಸಿದ ಸಹೋದರರು

ಉಡುಪಿ : ಅಣ್ಣ ಹಾಗೂ ತಮ್ಮ ಒಂದೇ ದಿನ ಸಾವನ್ನಪ್ಪಿದ ಘಟನೆ ಗುರುವಾರ ಬ್ರಹ್ಮಾವರ ತಾಲೂಕಿನ ದೇವಾಡಿಗರಬೆಟ್ಟು ಎಂಬಲ್ಲಿ ಸಂಭವಿಸಿದೆ. ದೇವಾಡಿಗರಬೆಟ್ಟು ರಘುನಾಥ ದೇವಾಡಿಗ ಹಾಗೂ ಸುಮತಿ ದೇವಾಡಿಗ ಅವರ ಪುತ್ರರಾದ ರಾಘವೇಂದ್ರ ಯಾನೇ ಮೋನ (40) ಗಣೇಶ್ ದೇವಾಡಿಗ (51) ಸಾವನ್ನಪ್ಪಿದವರು.

ಗುರುವಾರ ಬೆಳಗ್ಗೆ ರಾಘವೇಂದ್ರ ಯಾನೆ ಮೋನ ಇವರು ಅಲ್ಪಕಾಲದ ಅಸೌಖ್ಯದಿಂದ ಸಾವನ್ನಪ್ಪಿದ್ದು, ಸುದ್ದಿ ತಿಳಿದು ಮಧ್ಯಾಹ್ನ ಗಣೇಶ್ ದೇವಾಡಿಗ ಅವರೂ ಕೂಡ ಮೃತಮಟ್ಟಿದ್ದಾರೆ. ಇವರು ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.

ಇಬ್ಬರೂ ಕೂಡ ವಾದ್ಯ ಸಂಗೀತ ದಲ್ಲಿ ನಾಡಿನಾದ್ಯಂತ ಪ್ರಸಿದ್ಧಿ ಪಡೆದವರಾಗಿದ್ದು, ಒಂದೇ ದಿನ ಸಂಗೀತದ ಸ್ವರ ನಿಲ್ಲಿಸಿದ ಸಹೋದರರಿಬ್ಬರ ಸಾವಿಗೆ ಇಡೀ ಗ್ರಾಮವೇ ಮರುಕ ಪಡುತ್ತಿದೆ. ಅದರಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜವರಾಯ ಸಹೋದರರಿಬ್ಬರನ್ನು ಒಂದೇ ದಿನ ಬಲಿ ಪಡೆದು ಕುಟುಂಬಕ್ಕೆ ಆಘಾತ ನೀಡಿದ್ದಾನೆ.

Latest Indian news

Popular Stories