ಉಡುಪಿ: ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ
ಸ್ವಾಭಿಮಾನ ಇದ್ದರೆ, ಸಮುದಾಯದ ಬಗ್ಗೆ ಕಳಕಳಿ ಇದ್ದರೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಪಾದಯಾತ್ರೆ
ಸೇರಿಕೊಳ್ಳಿ ಎಂದು ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಸಚಿವ ಸುನಿಲ್ ಕುಮಾರ್ ಅವರು ಮುಖ್ಯಮಂತ್ರಿಗಳು
ನಾರಾಯಣಗುರು ನಿಗಮವನ್ನು ಬಜೆಟ್ ನಲ್ಲಿ ಘೋಷಣೆ
ಮಾಡುವುದಾಗಿ ಹೇಳಿದ್ದಾರೆ.ಇದು ಬರೀ ಭರವಸೆ ಮಾತ್ರ.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದವರೂ ಸಾಕಷ್ಟು
ಬಾರಿ ಭರವಸೆ ಕೊಟ್ಟಿದ್ದಾರೆ. ಇನ್ನೊಂದು ವಿಷಯ
ಏನೆಂದರೆ, ತಮ್ಮ ಪಾದಯಾತ್ರೆ ಕೇವಲ ನಿಗಮ ಸ್ಥಾಪನೆಗೆ
ಸಂಬಂಧಿಸಿದ್ದು ಮಾತ್ರ ಅಲ್ಲ ,10 ಬೇಡಿಕೆಗಳ ಈಡೇರಿಕೆಗಾಗಿ ಈ ಪಾದಯಾತ್ತೆ ಎಂದು ಸ್ಪಷ್ಟಪಡಿಸಿದರು.
ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಇಂದು ಬ್ರಹ್ಮಾವರ
ತಲುಪಿದ್ದು ಅಲ್ಲಿ ನಾರಾಯಣಗುರು ಸಭಾಭವನದಲ್ಲಿ
ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.