ಉಪ್ಪೂರು: ಸರಣಿ ಅಪಘಾತದಲ್ಲಿ ಇಬ್ಬರು ಗಂಭೀರ

ಬ್ರಹ್ಮಾವರ: ಉಪ್ಪೂರು ಬಳಿ ರಾ.ಹೆ. 66ರಲ್ಲಿ ರವಿವಾರ ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ ಈರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್‌ ಸ್ಕಿಡ್‌ ಆಗಿ ರಸ್ತೆಗೆ ಬಿದ್ದ ಸವಾರನನ್ನು ತಪ್ಪಿಸಲು ಹೋದ ಲಾರಿಗೆ ಹಿಂದಿನಿಂದ ಬಂದ ಇನ್ನೊಂದು ಲಾರಿ ಢಿಕ್ಕಿ ಹೊಡೆಯಿತು.

ಘಟನೆಯಲ್ಲಿ ಗಾಯಗೊಂಡವರು ಬೈಕ್‌ ಸವಾರ ಹರೀಶ್‌ ಹಾಗೂ ಲಾರಿ ಚಾಲಕ ಕುಮಟದ ಮಹೇಶ್‌ ಗೌಡ ಎಂದು ತಿಳಿದು ಬಂದಿದೆ. ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಮತ್ತೊಂದು ಲಾರಿಯು ಬಳಿಕ ರಸ್ತೆ ಬದಿಯ ದೀಪದ ಕಂಬಕ್ಕೆ ಢಿಕ್ಕಿಯಾಯಿತು. ಸ್ವಲ್ಪ ಸಮಯ ಟ್ರಾಫಿಕ್‌ ಜಾಂ ಆಯಿತು.

Latest Indian news

Popular Stories