ಉಡುಪಿ: ಚುನಾವಣಾ ಫಲಿತಾಂಶದ ಕಾವಿನ ಮಧ್ಯೆ ಉಡುಪಿಯಲ್ಲಿ ಮಳೆ ಆರ್ಭಟಿಸಿದೆ. ಗುಡುಗು-ಮಿಂಚು ಸಹಿತ ಉಡುಪಿಯ ಹಲವು ಪ್ರದೇಶದಲ್ಲಿ ಭಾರೀ ಮಳೆಯಾಗಿದೆ.
ಬಿಸಿಲ ಬೇಗೆಯಲ್ಲಿ ಕುದಿಯುತ್ತಿದ್ದ ಜನರಿಗೆ ಮಳೆ ತಂಪೆರದಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಬಳಲಿದ್ದ ಉಡುಪಿಯ ಜನತೆಗೆ ಸುರಿದ ಭಾರೀ ಮಳೆಯಿಂದಾಗಿ ಸ್ವಲ್ಪ ಸಮಾಧಾನ ಪ್ರಾಪ್ತಿಯಾಗಿದೆ.
ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ “ಮೋಚಾ’ ಚಂಡಮಾರುತವು “ಅತ್ಯಂತ ತೀವ್ರತರವಾದ’ ಚಂಡಮಾರುತವಾಗಿ ಬದಲಾಗಲಿದ್ದು, ಈ ಅಬ್ಬರವನ್ನು ಎದುರಿಸಲು ಪಶ್ಚಿಮ ಬಂಗಾಳ, ಬಾಂಗ್ಲಾ ಮತ್ತು ಮ್ಯಾನ್ಮಾರ್‌ಗಳು ಸಜ್ಜಾಗಿವೆ.