ಕರಾವಳಿಯಲ್ಲಿ ಉತ್ತಮ ಮಳೆ – ಬಿಸಿಲ ಬೇಗೆಯಿಂದ ಜನ ಕೊಂಚ ರಿಲ್ಯಾಕ್ಸ್!

ಉಡುಪಿ: ಕಳೆದ ಕೆಲವು ದಿನಗಳಿಂದ ಮಳೆ ಬಾರದೆ ತತ್ತರಿಸಿದ್ದ ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಮಳೆರಾಯ ಜೋರಾಗಿ ಅಬ್ವರಿಸುತ್ತಿದ್ದು ಬಿಸಿಲ ಬೇಗೆಯಿಂದ ಬೆಸೆತ್ತ ಜನಕ್ಕೆ ಮಳೆ ತಂಪೆಸಗಿದೆ.

ಈ ಬಾರಿ ಮಳೆ ಜುಲೈ ಹೊರತು ಪಡಿಸಿ ಜೂನ್ ಮತ್ತು ಆಗಸ್ಟ್ ನಲ್ಲಿ ತೀರಾ ಕಡಿಮೆಯಾಗಿತ್ತು. ಇದೀಗ ಆಗಸ್ಟ್ ಕೊನೆಯಲ್ಲಿ ಮಳೆ ಬರುತ್ತಿರುವುದು ಜನರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.

ಶನಿವಾರ,ಭಾನುವಾರ ಗುಡುಗು ಸಹಿತ ಭಾರೀ‌ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ.

Latest Indian news

Popular Stories