ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗೆದ್ದ ಒಂದೇ ದಿನದಲ್ಲಿ ಕಾಂಗ್ರೆಸ್ಸಿನಿಂದ ಆರನೇ ಗ್ಯಾರಂಟಿ ರಿಲೀಸ್ ಆಗಿದೆ. ಇದರನ್ವಯ ರಾಜ್ಯದಲ್ಲಿ ಮೊದಲ ಹತ್ಯೆ, ಅಲ್ಲಲ್ಲಿ ಹಿಂಸೆ, ದೇಶದ್ರೋಹದ ಪ್ರಕರಣಗಳು, ದೇಶ ವಿರೋಧಿ ಘೋಷಣೆ, ಪಾಕಿಸ್ತಾನ ಪರ ಘೋಷಣೆ, ಬಾವುಟ ವಿವಾದ ಇತ್ಯಾದಿಗಳು ಪ್ರಾರಂಭಗೊಂಡಿದ್ದು, ಕ್ರಮೇಣ ವಿಪರೀತ ಹಂತವನ್ನು ತಲುಪಲಿದೆ. ಭಾರತೀಯ ಜನತಾ ಪಾರ್ಟಿ ಇಂತಹ ಕುಕೃತ್ಯವನ್ನು ಸಹಿಸುವುದಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಅಧಿಕಾರ ಪಡೆಯುವ ಏಕೈಕ ಉದ್ದೇಶದಿಂದ ಜನರನ್ನು ಮರುಳುಗೊಳಿಸಲು ಘೋಷಿಸಿರುವ ಐದು ಗ್ಯಾರಂಟಿಗಳ ಬಗ್ಗೆ ಹೊಸ ಷರತ್ತುಗಳನ್ನು ವಿಧಿಸುತ್ತಿರುವ ಮೂಲಕ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್ ಗಳ ನಿಜ ಬಣ್ಣ ಬಯಲಾಗಲಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.