ಜನತಾದಳ ಜ್ಯಾತ್ಯಾತೀತ ಪಕ್ಷದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಾಗೂ ಯುವ ವಕೀಲರಾದ ಎಸ್.ಪಿ. ಬರ್ಬೋಜ ಇವರು ಜೆಡಿಎಸ್ ಪಕ್ಷವನ್ನು ತೊರೆದು ಇಂದು ವಿನಯ್ ಕುಮಾರ್ ಸೊರಕೆ ಇವರ ಸಮ್ಮುಖದಲ್ಲಿ ತನ್ನ ಮಾತೃ ಪಕ್ಷ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆ ಇವರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿತೇಂದ್ರ ಫುರ್ಟಾಡೋ, ಜಾನೆಟ್ ಬರ್ಬೋಜ, ಚಂದ್ರ ಶೇಖರ ಶೆಟ್ಟಿಗಾರ, ಮೊಹಮ್ಮದ್ ಇದ್ರಿಸ್, ಹರಿಶ್ಚಂದ್ರ ರಾವ್, ಶ್ರೀಮತಿ ಫರ್ಜಾನ, ಮೊಹಮ್ಮದ್ ಶೇಖ್ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು