ಕಾಪು: ಬೀದಿ ನಾಯಿ ದಾಳಿ ಮಗುವಿಗೆ ತೀವ್ರ ಗಾಯ

ಕಾಪು: ಬೀದಿ ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಮಗುವೊಂದು ತೀವ್ರವಾಗಿ ಗಾಯಗೊಂಡ ಘಟನೆ ಇಂದು ಸಂಜೆ ಉಚ್ಚಿಲದ ಪೊಲ್ಯ ಎಂಬಲ್ಲಿ ನಡೆದಿದೆ.

ಗಾಯಗೊಂಡ ಮಗುವನ್ನು ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲ್ಯ ಪರಿಸರದಲ್ಲಿ ಬೀದಿ ನಾಯಿಗಳ‌ ಕಾಟ ಹೆಚ್ಚಿದ್ದು ಹಲವರಿಗೆ ಕಚ್ಚಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ.

ಇದರಿಂದ ಸ್ಥಳೀಯರು ಆತಂಕಕ್ಜೆ ಒಳಗಾಗಿದ್ದು, ಕೂಡಲೇ ಈ ನಾಯಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

Latest Indian news

Popular Stories