ಕಾಮಗಾರಿ ಮಂಜೂರಾತಿಯ ಸಂದರ್ಭದಲ್ಲಿ ಗ್ರಾಮ ಸಭೆಗಳಲ್ಲಿ ನಿರ್ಣಯವಾದ ಅಭಿವೃದ್ದಿಗಳಿಗೆ ಮಾತ್ರ ಆದೇಶ ನೀಡಬೇಕು – ಎಂ. ಪಿ‌ ಮೊಯಿದಿನಬ್ಬ ಆಗ್ರಹ
ಗ್ರಾಮೀಣ ಪ್ರದೇಶಗಳಲ್ಲಿ ಇಂದು ಗ್ರಾಮ ಸಭೆಗಳು ಮಹತ್ವ ಕಳೆದು ಕೊಂಡು ಕೇವಲ ಕಾಟಾಚಾರಕ್ಕಾಗಿ ನಡೆಸಲಾಗುತ್ತಿದೆ, ಗ್ರಾಮೀಣ  ಭಾಗದಲ್ಲಿ ನಡೆಸಲಾಗುತ್ತಿರುವ ಅಭಿವೃದ್ಧಿ ಯೋಜನೆ, ಕಾಮಗಾರಿಗಳ ಮಂಜೂರಾತಿಯ ಸಂಧರ್ಭದಲ್ಲಿ ಗ್ರಾಮ ಸಭೆಗಳಲ್ಲಿ ನಿರ್ಣಯವಾದ ಅಭಿವ್ರದ್ದಿ ಕಾಮಗಾರಿಗಳನ್ನು ಮಾತ್ರ ಕೆೃಗೆತ್ತಿ ಕೊಳ್ಳುವಂತೆ ಆದೇಶ ನೀಡಬೇಕೆಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಎಂ. ಪಿ. ಮೊಯಿದಿನಬ್ಬ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಆಗ್ರಹಿಸಿದ್ದಾರೆ. 

ಈ ವಿಚಾರದಲ್ಲಿ ಅವರು ಸಚಿವ ರಿಗೆ ಪತ್ರವೊಂದನ್ನು ಬರೆದು ಇತ್ತೀಚಿನ ದಿನಗಳಲ್ಲಿ ಗ್ರಾಮಗಳಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ ಗ್ರಾಮ ಸಭೆಗಳು ಸಂಪೂರ್ಣ ಮಹತ್ವ ಕಳೆದು ಕೊಂಡಿದ್ದು ಗ್ರಾಮಸ್ಥರೆಲ್ಲಾ ಗ್ರಾಮ ಸಭೆಯಲ್ಲಿ ತಮ್ಮ ಗ್ರಾಮದಲ್ಲಿ ನಡೆಯಬೇಕಾದ ಅಭಿವೃದ್ಧಿ ಕೆಳಸಗಳ ಕುರಿತ ನಿರ್ಣಯ ಮಾಡಿದರೆ ಅದನ್ನು ಗ್ಗಾಮ ಪಂಚಾಯತಿ ಆಡಳಿದಿಂದ ಹಿಡಿದು ಲೋಕಸಭಾ ಸದಸ್ಯರು, ಶಾಸಕರು ಗಳು ಯಾರೂ ಪಾಲಿಸುತ್ತಿಲ್ಲ.   ಅಭಿವೃದ್ಧಿ ಕೆಲಸಗಳನ್ನು  ಮಂಜೂರು ಮಾಡುವಾಗ  ಪಕ್ಷದ ಕಾರ್ಯಕರ್ತರು ಸೂಚಿಸಿದ ಕೆಲಸಗಳು ಮಾತ್ರ ಮಂಜೂರು ಮಾಡುತ್ತಿದ್ದು ಇದು ಗ್ರಾಮ ಸಭೆಗಳನ್ನು ಅಣಕಿಸು ವಂತಾಗಿದೆ ಎಂದು ಪತ್ರದಲ್ಲಿ ಸಚಿವರ ಗಮನ ಸೆಳೆದ ಮೊಯಿದಿನಬ್ಬ ಅವರು ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸ ಭಾ ಸದಸ್ಯರು ಮತ್ತು ಇತರ ಸ್ಥರದ ಜನ‌ಪ್ರತಿನಿಧಿಗಳು ಜನ ಪ್ರತಿಧ್ವನಿ ಗಳು ತಮ್ಮ ಪ್ರದೇಶಾಭಿವೃದ್ಧಿ  ಬಳಸುವಾಗ ಕಡ್ಡಾಯವಾಗಿ ಗ್ರಾಮ ಸಭೆಗಳಲ್ಲಿ ಪ್ರಸ್ತಾಪಿಸಿದ ಕಾಮಗಾರಿಗಳನ್ನು ಮಾತ್ರ ಮಂಜೂರು ಮಾಡುವಂತೆ  ಮತ್ತು ಇತರ  ಸೌಲಭ್ಯಗಳಿಗಾಗಿ ಫಲಾನುಭಿಗಳ ಆಯ್ಕೆಗಳಲ್ಲಿ ಕೂಡಾ ಗ್ರಾಮ ಸಭೆಗಳ ನಿರ್ಣಯಗಳನ್ನು ಮಾತ್ರ ಪರಿಗಣಿಸಲು ಆದೇಶಿಸಬೇಕೆಂದು ಸಚಿವರನ್ನು ಆಗ್ರಹಿಸಿದ್ದಾರೆ

Latest Indian news

Popular Stories