ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧಿಸಲು ಶ್ರೀರಾಮ ಸೇನಾ ಕಾರ್ಯಕರ್ತರಿಂದ ವಿರೋಧ!

ಉಡುಪಿ: ಕಾರ್ಕಳ ಕ್ಷೇತ್ರದಲ್ಲಿ ಇಂಧನ ಸಚಿವ ಸುನಿಲ್
ಕುಮಾರ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು
ನಿರ್ಧರಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್
ಮುತಾಲಿಕ್‌ಗೆ ಅವರಿಗೆ ಸ್ವ ಸಂಘಟನೆಯಿಂದಲೇ ಅಪಸ್ವರ ಕೇಳಿ ಬಂದಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಂಗಳೂರು ವಿಭಾಗಾಧ್ಯಕ್ಷ ಮೋಹನ್ ಭಟ್,ತಮ್ಮ ಕಷ್ಟಕಾಲದಲ್ಲಿ ತಮ್ಮೊಂದಿಗೆ ಇದ್ದಂತಹ ನಿಷ್ಟಾವಂತ
ಕಾರ್ಯಕರ್ತರನ್ನು ಕಡೆಗಣಿಸಿ ಇವತ್ತು ನಮ್ಮನಮ್ಮಲ್ಲೇ
ಕಚ್ಚಾಡುವಂತೆ ಮಾಡಿರುವುದು ಬೇಸರ ತಂದಿದೆ ಎಂದಿದ್ದಾರೆ.

ಕಾರ್ಕಳದಲ್ಲಿ ಸ್ಪರ್ಧೆಗೆ ನಿಂತರೆ ನಮ್ಮ ಬೆಂಬಲ ಇಲ್ಲ
ಎಂದಿದ್ದಾರೆ.ಈ ನಿಲುವಿನಿಂದ ಬಹಳಷ್ಟು ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಹಿಂದೂ ಯುವಕರೇ ತಮ್ಮ ಆಸ್ತಿ. ಎಲ್ಲ ಹಿಂದೂ ಸಂಘಟನೆಗಳೂ ಕೂಡ ತಮ್ಮನ್ನು ಗುರುಗಳೇ ಎಂದು ಪ್ರೀತಿಯಿಂದ ಕರೆಯುತ್ತವೆ. ತಮ್ಮ ಈ ನಿರ್ಧಾರದಿಂದ ಬಹಳಷ್ಟು ಕಾರ್ಯಕರ್ತರು ಬೀದಿಪಾಲಾಗುತ್ತಾರೆ.

ನಮಗೆ ಹಿಂದೂ ಯುವಕರನ್ನು ಒಗ್ಗಟ್ಟಿನಲ್ಲಿರುವುದನ್ನು
ಕಲಿಸಿದ ನೀವೇ ಈಗ ನಮ್ಮ ಒಗ್ಗಟ್ಟನ್ನು ಮುರಿಯುವ
ಕೆಲಸ ಮಾಡಿರುವುದು ಸರಿಯಲ್ಲ. ಯಾರೋ ಕೆಲವರ
ಮಾತು ಕೇಳಿ ಕಾರ್ಕಳದಲ್ಲಿ ಸ್ಪರ್ಧೆಗೆ ಇಳಿಯಬೇಡಿ ಎಂದು
ಒತ್ತಾಯಿಸಿದ್ದಾರೆ.

ಸುನೀಲ್ ಕುಮಾರ್ ಮತ್ತು ಪ್ರಮೋದ್ ಮುತಾಲಿಕ್ ನಡುವೆ ಏನೋ ವೈಯಕ್ತಿಕ ದ್ವೇಷ ಇದ್ದ ಕಾರಣ ಈ ಬೆಳವಣಿಗೆ ನಡೆದಿದೆ ಎಂದಿದ್ದಾರೆ. ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಗೆಲುವು ಸಾಧಿಸುದಿಲ್ಲ ಎಂಬುವುದು ಗೊತ್ತಿದೆ. ಇದರ ಲಾಭ ಪಡೆದು ಕಾಂಗ್ರೆಸ್ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದರು.

Latest Indian news

Popular Stories