ಕಾರ್ಕಳದಲ್ಲಿ ಹಲವು ವಿನೂತನ ಹಾಗೂ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ – ಸಚಿವ ಸುನೀಲ್ ಕುಮಾರ್

ಸ್ವರ್ಣ ಕಾರ್ಕಳದ ಭಾಗವಾಗಿ ಕಾರ್ಕಳದಲ್ಲಿ ಹಲವು ವಿನೂತನ ಹಾಗೂ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಂಧನ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಅವರು ಇಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆದ ಪೊಲೀಸ್ ಪಂಜಿನ ಕವಾಯತು ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಬೆಂಗಳೂರು ಮತ್ತು ಮೈಸೂರುಗೆ ಸೀಮಿತವಾಗಿದ್ದ ಪೊಲೀಸ್ ಬ್ಯಾಂಡ್ ಮತ್ತು ಮಂಜಿನ ಕವಾಯತು ಕಾರ್ಯಕ್ರಮವನ್ನು ಕಾರ್ಕಳದಲ್ಲಿ ಆಯೋಜಿಸುವ ಮೂಲಕ, ತಾಲೂಕಿಗೆ ಇನ್ನಷ್ಟು ಗರಿಮೆ , ಹೊಸತನ ನೀಡುವ ಪ್ರಯತ್ನವಾಗಿದೆ . ಕಾರ್ಕಳ ದಲ್ಲಿ ಆಯೋಜಿಸುವ ಎಲ್ಲಾ ಕಾರ್ಯಕ್ರಮ ಗಳಿಗೆ ಜನರ ಸಹಕಾರ ಉತ್ತಮವಾಗಿದೆ. ಇತ್ತೀಚೆಗೆ ಉದ್ಘಾಟನೆಯಾದ ಪರಶುರಾಮ ಥೀಮ್ ಪಾರ್ಕ್ ಗೆ ಲಕ್ಷಾಂತರ ಜನ ಭೇಟಿ ನೀಡಿದ್ದಾರೆ. ಪಂಜಿನ ಕವಾಯತು ಗೆ ಸ್ಥಳೀಯ ಭುವನೇಂದ್ರ ಕಾಲೇಜು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ , ಸ್ವರ್ಣ ಕಾರ್ಕಳ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಉತ್ತಮವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಗೇರು ನಿಗಮದ ಅಧ್ಯಕ್ಷ ಬಿ. ಮಣಿರಾಜ್ ಶೆಟ್ಟಿ, ಕಾರ್ಕಳ ಪುರಸಭೆಯ ಅಧ್ಯಕ್ಷೆ ಸುಮ ಕೇಶವ, ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. , ಭುವನೇಂದ್ರ ಕಾಲೇಜು ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಎಸ್ಪಿ ಹಾಕೆ ಅಕ್ಷಯ್ ಮಚ್ಚೆಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಮೈಸೂರು ದಸರಾ ಪ್ರದರ್ಶನ ದಲ್ಲಿ ಮಾತ್ರ ಕಂಡುಬರುವ ಪಂಜಿನ ಕವಾಯತು ಹಾಗೂ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಶ್ವಾನಗಳಿಂದ ಆಕರ್ಷಕ ಸಾಹಸ ಪ್ರದರ್ಶನ ನಡೆಯಿತು.

ಉಡುಪಿ ಪೊಲೀಸ್ ಶ್ವಾನದಳದ ಶ್ವಾನಗಳಿಂದ ಬಾಂಬ್ ಪತ್ತೆ, ಅಪರಾಧ ಪತ್ತೆ, ಕಳ್ಳತನ ದರೋಡೆ ವ್ಯಕ್ತಿಯ ಪತ್ತೆ, ವಸ್ತುಗಳ ರಕ್ಷಣೆ, ಗುಂಪು ವಿಧೇಯತೆ ಪ್ರದರ್ಶನ, ರಿಂಗ್ jump, ಹರ್ಡ್ಲ್ jump ನಡೆಯಿತು.
ಐಕಾನ್, ಕ್ಯಾಪ್ಟನ್, ಬ್ರೊನಿ,ಸ್ನಿಪೆರ್ ಹೆಸರಿನ ಶ್ವಾನಗಳು ಈ ಸಾಹಸ ಪ್ರದರ್ಶನದಲ್ಲಿ ಭಾಗವಹಿಸಿದ್ದವು.

Latest Indian news

Popular Stories