ಕಾರ್ಕಳ: ವ್ಯಾಲೆಂಟೈನ್ಸ್ ಡೇ ಗಿಫ್ಟ್ ಪಾರ್ಸೆಲ್ ಹೆಸರಿನಲ್ಲಿ ಏಳು ಲಕ್ಷ ವಂಚನೆ!

ಕಾರ್ಕಳ, ಫೆ.17: ಕಾರ್ಕಳದ ವ್ಯಕ್ತಿಯೊಬ್ಬರಿಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಪಾರ್ಸೆಲ್ ಹೆಸರಿನಲ್ಲಿ 7,63,500ರೂ. ವಂಚಿಸಿರುವ ಘಟನೆ ನಡೆದಿದೆ.
ಫೆಲಿಕ್ಸ್ ಡಯಸ್ ಎಂಬ ಹೆಸರಿನ ಫೇಸ್ಬುಕ್ ಖಾತೆದಾರೊಬ್ಬರು ಕಾರ್ಕಳದ ವ್ಯಕ್ತಿಗೆ ಪರಿಚಯವಾಗಿದ್ದು, ಆಕೆ ತಾನು ಯೂರೋಪಿನ ಸ್ರೈಪ್ರಸ್ ಎಂಬಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಳು. ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ಪಾರ್ಸೆಲ್ ಕಳುಹಿಸುವುದಾಗಿ ತಿಳಿಸಿದ ಆಕೆ ಅದರ ಫೋಟೋವನ್ನು ಕೂಡ ಇವರಿಗೆ ಕಳುಹಿಸಿದ್ದಳು. ಇದನ್ನು ಈ ವ್ಯಕ್ತಿ ನಂಬಿದ್ದರು.

ಫೆ.13ರಂದು ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿ ಎಂದು ಕರೆ ಮಾಡಿ ಬೇರೆ ಬೇರೆ ರೀತಿಯಾಗಿ ಹೇಳಿ ಹಣವನ್ನು ಡಿಪಾಸಿಟ್ ಮಾಡುವಂತೆ ಕಾರ್ಕಳದ ವ್ಯಕ್ತಿಗೆ ತಿಳಿಸಿದ್ದರು. ಇದನ್ನು ನಂಬಿದ ಇವರು, ಫೆ.14ರಂದು ಒಟ್ಟು 7,63,500ರೂ. ಹಣವನ್ನು ಡಿಪಾಸಿಟ್ ಮಾಡಿ ಮೋಸ ಹೋಗಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories