ಕುಂದಾಪುರ, ಜ.16: ಗುಲ್ವಾಡಿ ಗ್ರಾಮದ ಕುದ್ರು ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಕಸಾಯಿಖಾನೆ ಮೇಲೆ ಗ್ರಾಮಾಂತರ ಠಾಣೆ ಎಸ್‌ಐ ಪವನ್ ನಾಯಕ್ ಅವರು ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಮೂವರು ಪರಾರಿಯಾಗಿದ್ದು, ಆರೋಪಿ ಮಹಮ್ಮದ್ ಯೂಸುಬ್ ಎಂಬಾತ ಸಿಕ್ಕಿಬಿದ್ದಿದ್ದಾನೆ.
ಜಾನುವಾರು ಹತ್ಯೆ ನಡೆಯುತ್ತಿದ್ದ ಶೆಡ್‌ನಾದ್ಯಂತ ಹೋಳು ಮಾಂಸ, ಎರಡು ಗೋವಿನ ತಲೆಗಳು, ಎಂಟು ಕಾಲುಗಳು ಮತ್ತು ಇತರ ತ್ಯಾಜ್ಯಗಳು ಹರಡಿಕೊಂಡಿವೆ. ಹಸುವನ್ನು ಕಂಬಕ್ಕೆ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಪೊಲೀಸರು 73 ಕೆಜಿ ಗೋಮಾಂಸ ಮತ್ತು ಒಂದು ಹಸುವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.