ಕೆಮ್ಮಣ್ಣು: ತರಕಾರಿ ವ್ಯಾಪಾರಿಗಳು ಸಹ ಕಾರ್ಮಿಕನ ಶವವನ್ನು ರಸ್ತೆಯಲ್ಲಿ ಎಸೆದ ಘಟನೆ – ಇಬ್ಬರ ಬಂಧನ

ಉಡುಪಿ, ಫೆ.16: ಅಮಾನವೀಯ ಕೃತ್ಯವೆಸಗಿ ಇಬ್ಬರು ತಮ್ಮ ಸಹ ಕಾರ್ಮಿಕನ ಶವವನ್ನು ರಸ್ತೆ ಬದಿ ಎಸೆದು ಪರಾರಿಯಾಗಿದ್ದರು. ಕೆಮ್ಮಣ್ಣು ಗ್ರಾಮ ಪಂಚಾಯಿತಿ ಬಳಿ ಘಟನೆ ನಡೆದಿತ್ತು.

ಇದೀಗ ಮೃತದೇಹ ಎಸಗಿ ಪರಾರಿಯಾಗಿರುವವರನ್ನು ಪೊಲೀಸರು ಬಂಧಿಸಿದ್ದಾರೆ.

ಲಭ್ಯವಾದ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಇಬ್ಬರು ವ್ಯಕ್ತಿಗಳು ಗೂಡ್ಸ್ ಟೆಂಪೋಗೆ ಆಗಮಿಸಿ ಮೃತದೇಹವನ್ನು ರಸ್ತೆಬದಿಯಲ್ಲಿ ಎಸೆದಿದ್ದ ದೃಶ್ಯ ವೈರಲಾಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ಈಶ್ವರ ಮಲ್ಪೆ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ.

ಮಾಹಿತಿ ಪ್ರಕಾರ ಟೆಂಪೋದಲ್ಲಿ ಬಂದ ಇಬ್ಬರು ಹಾನಗಲ್ ಜಿಲ್ಲೆಯ ತರಕಾರಿ ಮಾರಾಟಗಾರರು. ಮೃತರು ತರಕಾರಿ ಮಾರುವವರೂ ಅವರ ಜೊತೆ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಚೇತರಿಸಿಕೊಳ್ಳದೆ ಟೆಂಪೋ ಹಿಂಬದಿಯಲ್ಲಿ ಮಲಗಿದ್ದರು. ಅಸ್ವಸ್ಥ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ತಿಳಿದ ಬಳಿಕ ಉಳಿದ ಇಬ್ಬರು ಆತನ ಶವವನ್ನು ರಸ್ತೆಬದಿ ಎಸೆದು ಪರಾರಿಯಾಗಿದ್ದಾರೆ.

ಸಿಸಿಟಿವಿ ಆಧಾರದಲ್ಲಿ ವಾಹನ ಹಾಗೂ ಕೃತ್ಯ ಎಸಗಿದ ವ್ಯಕ್ತಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

Latest Indian news

Popular Stories