ಗಂಗೊಳ್ಳಿ: ಹೊಸಾಡು ಗ್ರಾಮದ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ರಸ್ತೆ ದಾಟಲು ನಿಂತಿದ್ದ ತ್ರಾಸಿ ಗ್ರಾಮದ ಆನಗೋಡು ನಿವಾಸಿ ನಾಗೇಶ ಪೂಜಾರಿ (60) ಅವರಿಗೆ ಕಾರು ಢಿಕ್ಕಿಯಾಗಿ ಗಂಭೀರ ಗಾಯಗೊಂಡು, ಸಾವನ್ನಪ್ಪಿದ ಘಟನೆ ಎ. 21ರಂದು ರಾತ್ರಿ 11.15ರ ಸುಮಾರಿಗೆ ಸಂಭವಿಸಿದೆ.
ಗಂಭೀರ ಗಾಯಗೊಂಡ ನಾಗೇಶ ಪೂಜಾರಿಯವರನ್ನು ರತ್ನಾಕರ ಆಚಾರ್ಯ ಹಾಗೂ ಸುನಿಲ್ ಪೂಜಾರಿ ಎಂಬುವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಕಾರು ಚಾಲಕ ಸ್ಟಾನಿ ಡಿ’ಸಿಲ್ವ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.