ಜಾತಿ ಆಧಾರದಲ್ಲಿ ಹೇಳಿಕೆ ನೀಡುವುದು, ವ್ಯಕ್ತಿಯನ್ನು ಜಾತಿಯಿಂದ ಅಳೆಯುವುದು ಸರಿಯಲ್ಲ – ರಘುಪತಿ ಭಟ್

ಉಡುಪಿ: ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯದ ಬಗ್ಗೆ ಮಾಡಿರುವ ವಿಚಾರವಾಗಿ ಮಾತನಾಡಿದ ಶಾಸಕ ರಘುಪತಿ ಭಟ್‌ , ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಚುನಾವಣೆಯಲ್ಲಿ ಬಹುಮತ ಬಂದ ಪಕ್ಷ ನಿರ್ಧರಿಸಲಿದೆ.

ಬಿಜೆಪಿಗೆ ಬಹುಮತ ಬರಲಿದೆ ಎಂಬುದು ಎಚ್‌.ಡಿ. ಕುಮಾರಸ್ವಾಮಿಯವರಿಗೆ ಸ್ಪಷ್ಟವಾಗಿದೆ. ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಮತ್ತು ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ವರಿಷ್ಠರು ತೀರ್ಮಾನಿಸಲಿದ್ದಾರೆ.

ಜಾತಿ ಆಧಾರದಲ್ಲಿ ಹೇಳಿಕೆ ನೀಡುವುದು, ವ್ಯಕ್ತಿಯನ್ನು ಜಾತಿಯಿಂದ ಅಳೆಯುವುದು ಸರಿಯಲ್ಲ ಎಂದರು.

Latest Indian news

Popular Stories