ಜೈನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಡಾ.ಬಿಆರ್.ಅಂಬೇಡ್ಕರ್ ಅವರ ಅವಹೇಳನ; ಜಯನ್ ಮಲ್ಪೆಯಿಂದ ದೂರು ದಾಖಲು

ಮಲ್ಪೆ: ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಂವಿಧಾನದ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಕುರಿತು ಪ್ರದರ್ಶಿಸಿದ್ದ ವಿವಾದತ್ಮಕ ಕಿರು ನಾಟಕದ ವಿರುದ್ಧ ಜನಪರ ಹೋರಾಟಗಾರ ಜಯನ್ ಮಲ್ಪೆ, ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜೈನ್ ವಿಶ್ವವಿದ್ಯಾಲಯದ ಮೆನೇಜ್ಮೆಂಟ್ ಸ್ಟಡೀಸ್ ಕೇಂದ್ರದ ಥಿಯೇಟರ್ ಗ್ರೂಪ್ ಕಾಲೇಜು ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಿದ ಡೆಲ್ರಾಯ್ಸ್ ಬಾಯ್ಸ್ ಮ್ಯಾಡ್ ಆಡ್ಸ್ನ ಭಾಗವಾಗಿ ಫೆಸ್ಟ್ನಲ್ಲಿ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ಕುರಿತು ಅಪಹಾಸ್ಯ ಮತ್ತು ಗೇಲಿ ಮಾಡುತ್ತಾರೆ.ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಕಿಟ್‌ನಲ್ಲಿ ಕೆಳಜಾತಿಯ ಹಿನ್ನಲೆಯ ವ್ಯಕ್ತಿಯೊಬ್ಬ ಮೇಲ್ಮಾತಿ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಯತ್ನಿಸಿರುವುದನ್ನು ಪ್ರದರ್ಶಿಸಿದ್ದು,ಈ ವೇಳೆ ಆತ ತಾನು ದಲಿತ,ಕೀಳು ಜಾತಿಯವ ಎಂದು ಹೇಳಿಕೊಂಡಾಗ ಡೋಂಟ್ ಟಚ್ ಮಿ,ಟಚ್ ಮಿ ಎಂಬ ಹಾಡನ್ನು ಗೇಲಿ ಮಾಡುತ್ತಾ ಪ್ಲೇ ಮಾಡಿ ಉದೇಶಪರ‍್ವಕ ಅವಮಾನಿಸಿರುತ್ತಾರೆ ಮತ್ತು ಬಿ.ಆರ್.ಅಂಬೇಡ್ಕರ್ ಅವರನ್ನು ಬಿಯರ್ ಅಂಬೇಡ್ಕರ್ ಎಂದು ಅತ್ಯಂತ ಕೀಳು ಮಟ್ಟದಲ್ಲಿ ಅವಮಾನಿಸಿರುವುದಾಗಿ ಜಯನ್ ಮಲ್ಪೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ದೇಶದ ಭಾರತರತ್ನ ಸಂವಿಧಾನ ಶಿಲ್ಪಿಯನ್ನು ಅತ್ಯಂತ ತುಚ್ಚವಾಗಿ ಅವಮಾನಿಸಿರುವುದು ದೇಶದ್ರೋಹವೆಂದೇ ಪರಿಗಣಿಸಿ, ಜಾತಿ ಹಿನ್ನಲೆಯಲ್ಲಿ ಕಾನೂನುಬಾಹಿರ ಅಶ್ಪೃಸ್ಯತೆ ಮಾಡಿ ನಾಟಕ ಪ್ರದರ್ಶಿಸಿ,ಅಪರಾಧ ಎಸೆಗಿರುವ ಜೈನ್ ಕಾಲೇಜಿನ ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಕಾನೂನುಕ್ರಮ ಕೈಗೊಳ್ಳಬೇಕೆಂದು ಮಲ್ಪೆ ವೃತ್ತ ಪೊಲೀಸ್ ನಿರೀಕ್ಷಕರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

Latest Indian news

Popular Stories