ಮಲ್ಪೆ: ಮಲ್ಪೆಯ ಸೈಂಟ್ ಮೆರೀಸ್ ದ್ವೀಪ ವಿಶ್ವ ವಿಖ್ಯಾತ. ಇಲ್ಲಿ ಪ್ರತಿದಿನ ಎಂಬಂತೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಮಲ್ಪೆ ಬೀಚ್ ನೋಡಲು ಬರುವ ಬಹುತೇಕ ಮಂದಿ ಸೈಂಟ್ ಮೆರೀಸ್ ದ್ವೀಪ ವೀಕ್ಷಿಸಲು ಹೋಗುವುದು ಸಾಮಾನ್ಯ. ಇದೀಗ ಬೈಕ್ ವ್ಲಾಗರ್ ಒಬ್ಬರ ವೀಡಿಯೋವೊಂದು “ಸಖತ್ ಕಟೆಂಟ್” ಎಂಬ ಫೇಸ್ಬುಕ್ ಪೇಜಿನಲ್ಲಿ ವೈರಲಾಗುತ್ತಿದೆ.
ಆರಂಭದಲ್ಲಿ ಪಾರ್ಕಿಂಗ್ ಹಣ ವಸೂಲಿ ಮಾಡುವ ಸಿಬ್ಬಂದಿಯೊಬ್ಬ ಬೈಕ್ ವ್ಲಾಗರ್ ಬಳಿ ಕ್ಯಾಮರಕ್ಕಾಗಿ ನೂರು ರೂಪಾಯಿ ಪಡೆದು ರಶೀದಿ ಅಗತ್ಯ ವಿಲ್ಲವೆಂದು ಕಳುಹಿಸಿಕೊಡುತ್ತಾನೆ. ಆದರೆ ಸೈಂಟ್ ಮೇರಿಸ್ ದ್ವೀಪದಲ್ಲಿ ಕುಳಿತಿರುವ ಟಿಕೆಟ್ ಕೌಂಟರ್ ಸಿಬ್ಬಂದಿ ಮತ್ತೆ ಕ್ಯಾಮರಾಕ್ಕಾಗಿ ಹಣ ಕೇಳುತ್ತಾನೆ. ವ್ಲಾಗರ್ ಈ ಮುಂಚೆ ಕೊಟ್ಟ ಕುರಿತು ತಿಳಿಸಿದಾಗ ಅದು ನಮಗೆ ತಿಳಿದಿಲ್ಲ. ಹಣ ಪಾವತಿಸಲು ಇಲ್ಲಿ ಇರುವುದು. ಇಲ್ಲದಿದ್ದರೆ ಇಲ್ಲಿ ಕ್ಯಾಮರ ಇಟ್ಟು ಹೋಗಿ ಎನ್ನುತ್ತಾನೆ. ಆದರೆ ಲಕ್ಷಾಂತರ ರೂಪಾಯಿ ಬೆಲೆ ಬಾಳು ಕ್ಯಾಮರ ಅಲ್ಲಿ ಬಿಟ್ಟು ಹೋಗಲು “ಟಿಕೆಟ್ ಕೌಂಟರ್’ಗೆ ಡೋರ್ ಇಲ್ಲ, ಲಾಕರ್ ಇಲ್ಲ” ಎಂದು ಪ್ರಶ್ನಿಸುತ್ತಾನೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯುತ್ತದೆ. ಈ ವೀಡಿಯೋ ಇದೀಗ ಜಾಲಾತಾಣದಲ್ಲಿ ಸದ್ದು ಮಾಡುತ್ತಿದ್ದು ನೆಟ್ಟಿಗರು ಸಿಬ್ಬಂದಿಗಳ ಬೇಜಾಬ್ದರಿಯುತ ವರ್ತನೆಗೆ ಗರಮ್ ಆಗಿದ್ದಾರೆ.
ವೀಡಿಯೋ ಲಿಂಕ್:
https://fb.watch/i5Otdzf-FS/?mibextid=j8LeHn
ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಲಾಕರ್ ಇಲ್ಲದೆ, ಸರಿಯಾದ ವ್ಯವಸ್ಥೆ ಇಲ್ಲದೆ ಬಿಟ್ಟು ಹೋಗಲು ಸಾಧ್ಯವೇ? ಎಂಬ ಪ್ರಶ್ನೆ ಎತ್ತುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಪಾರ್ಕಿಂಗ್ ನ ವ್ಯಕ್ತಿ ರಶೀದಿ ಇಲ್ಲದೆ ಕ್ಯಾಮರಕ್ಕಾಗಿ ಹಣ ಎತ್ತಲು ಅಧಿಕಾರ ನೀಡಿದವರು ಯಾರು? ಇದು ಪ್ರವಾಸಿಗರನ್ನೂ ಲೂಟುವ ಪರಿಯೇ? ಎಂದು ಪ್ರಶ್ನಿಸಲಾಗುತ್ತಿದೆ. ಒಟ್ಟಿನಲ್ಲಿ ಸಿಬ್ಬಂದಿಗಳ ಬೇಜಬ್ದಾರಿಯುತ ವರ್ತನೆಯಿಂದ ಜಿಲ್ಲೆಯ ಮಾನ ಹರಾಜಾಗುತ್ತಿದೆ ಎಂಬುವುದು ಸಾರ್ವಜನಿಕರ ಅಂಬೋಣ.