ತಾಕತ್ತಿದ್ದರೆ ಭಜರಂಗದಳ ನಿಷೇಧಿಸಿ : ಯಶ್ ಪಾಲ್ ಸುವರ್ಣ

ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಾಕತ್ತಿದ್ದರೆ ಭಜರಂಗದಳವನ್ನು ನಿಷೇಧಿಸಿ ಎಂದು ಉಡುಪಿ ಜಿಲ್ಲಾ ಭಜರಂಗ ದಳದ ಮಾಜಿ ಸಂಚಾಲಕ, ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದುತ್ವದ ವಿಚಾರಧಾರೆಯೊಂದಿಗೆ ರಾಷ್ಟ್ರ ವಿರೋಧಿಗಳಿಗೆ ಸಿಂಹ ಸ್ವಪ್ನ ಸಂಘಟನೆಯಾಗಿ, ಗೋ ಕಳ್ಳರ ಹಾಗೂ ಲವ್ ಜಿಹಾದಿಗಳ ವಿರುಧ್ದ ಕಠಿಣ ನಿಲುವು ತಾಳಿದ ದೇಶ ಭಕ್ತ ಹಿಂದೂ ಸಂಘಟನೆಯನ್ನು ದಮನಿಸುವ ಯತ್ನದ ಮೂಲಕ ರಾಜ್ಯ ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರ ಓಲೈಕೆಗೆ ಮುಂದಾಗಿದೆ.

ಈ ಹಿಂದೆ ಸದಾ ಹಿಂದೂ ವಿರೋಧಿ ನಿಲುವಿನ ಸರಕಾರ ನಡೆಸಿದ ಸಿದ್ದರಾಮಯ್ಯ ಈಗಾಗಲೇ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಹ್ತಿರದಿಂದ ಹಿಂಪಡೆಯುವ ಬಗ್ಗೆ ಹಾಗೂ ಟಿಪ್ಪು ಜಯಂತಿ ಆಚರಣೆಗೆ ಮುಂದಾಗುವ ಮೂಲಕ ಹಿಂದೂ ಸಂಘಟನೆಯ ಕಾರ್ಯಕರ್ತರ ತಾಳ್ಮೆ ಪರೀಕ್ಷೆಗೆ ಮುಂದಾಗಿದ್ದಾರೆ.

ಕೇಸರಿ ಶಾಲು ಧರಿಸಿ ಮನೆ ಮನೆ ಭೇಟಿ ನೀಡಿ ನಕಲಿ ಹಿಂದುತ್ವದ ಮುಖವಾಡ ಧರಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭಜರಂಗ ದಳ ನಿಷೇಧದ ಬಗ್ಗೆ ತಮ್ಮ ನಿಲುವು ಸ್ಪಷ್ಟ ಪಡಿಸಲಿ. ಕಾಂಗ್ರೆಸ್ ಪಕ್ಷದ ಈ ಹಿಂದೂ ವಿರೋಧಿ ಮನಸ್ಥಿತಿಗೆ
ಸಮಸ್ತ ಹಿಂದೂ ಸಮಾಜ ತಕ್ಕ ಉತ್ತರ ಮುಂದಿನ ಚುನಾವಣೆಯಲ್ಲಿ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories