ನಿರಂತರ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿದ ಬಿಜೆಪಿ ಸರಕಾರ – ರಮೇಶ್ ಕಾಂಚನ್

ದಿನನಿತ್ಯ ಬಳಸುವ ಅಡುಗೆ ಅನಿಲ ಗೃಹಬಳಕೆಯ ಸಿಲಿಂಡರ್‌ನ ಬೆಲೆ ಇಂದು ಮತ್ತೆ 50ರೂ ಏರಿಸಿ ಬಡ ಮತ್ತು ಮಧ್ಯಮ ವರ್ಗದವರ ಜನರ ಜೇಬಿಗೆ ಕತ್ತರಿ ಹಾಕಿ ಕೇಂದ್ರ ಸರಕಾರ ಆಡಳಿತ ನಡೆಸುತ್ತಿದೆ. ಇತ್ತ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದ್ದಾರೆ. ವಾರದ ಹಿಂದೆ ಜನಸಾಮಾನ್ಯರು ಬಳಸುವ ಅಕ್ಕಿ, ಹಾಲು, ತುಪ್ಪ, ಮೀನು ಗೋಧಿ ಹಿಟ್ಟು, ಬೇಳೆ, ಬೆಲ್ಲ ಮೊದಲಾದವುಗಳಿಗೆ 18% ಜಿ.ಎಸ್.ಟಿ ಹಾಕುವುದರ ಮೂಲಕ ಜನರ ನೆಮ್ಮದಿ ಹಾಳು ಮಾಡಿ ಗಾಯದ ಮೇಲೆ ಮತ್ತೆ ಬರೆ ಎಳೆದಿದ್ದಾರೆ.

ಜನರು ಬಿಜೆಪಿ ಸರಕಾರದ ಆಡಳಿತದ ವಿರುದ್ಧ ಹಾಗೂ ದಿನ ದಿನ ಬೆಲೆ ಏರಿಕೆಗೆ ರೋಸಿ ಹೋಗಿದ್ದಾರೆ. ಇದು ಬಿಜೆಪಿ ಸರ್ಕಾರದ ಆಡಳಿತ ಕಾರ್ಯವೈಖರಿಯಾಗಿದೆ. ಜನಸಾಮಾನ್ಯರು ಪಡುವ ಕಷ್ಟವನ್ನು ತಿಳಿಯದೆ ತೆರಿಗೆಯ ಮೇಲೆ ತೆರಿಗೆ ಹಾಕುವಂತಹ ಆಡಳಿತ ಬಿಜೆಪಿ ಸರ್ಕಾರವು ಇದಾಗಿದೆ ಎಂದು ತಿಳಿಸಿ ಮುಂದಿನ ದಿನಗಳಲ್ಲಿ ಜನರು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಧ್ಯಮದ ಮೂಲಕ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Latest Indian news

Popular Stories