ಪಡುಬಿದ್ರಿ: ಗೃಹಿಣಿ ಸಂಶಯಾಸ್ಪದ ಸಾವು; ಬೀಚ್ ಬಳಿ ಪತಿ ಬಂಧನ

ಪಡುಬಿದ್ರಿ: ಪತಿಯ ಮಾನಸಿಕ, ದೈಹಿಕ ಹಿಂಸೆಯಿಂದಾಗಿ ಸಂಶಯಾಸ್ಪದ ಸಾವಿಗೀಡಾದ ಮಮತಾ ಅವರ ಆತ್ಮಹತ್ಯೆ ಪ್ರಕರಣದ ಆರೋಪಿ ಆಕೆಯ ಪತಿ, ಬೀಡು ನಿವಾಸಿ ಚೇತನ್‌ ಕುಮಾರ್‌ ಕೆ. (42)ನನ್ನು ಫೆ. 23ರಂದು ರಾತ್ರಿ ಪಡುಬಿದ್ರಿ ಬೀಚ್‌ ಬಳಿಯಲ್ಲಿ ಬಂಧಿಸಲಾಗಿದೆ.

ಆತನನ್ನು ಉಡುಪಿಯ ನ್ಯಾಯಾಲಯಕ್ಕೆ ಪಡುಬಿದ್ರಿ ಪೊಲೀಸರು ಶುಕ್ರವಾರ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ಪಡುಬಿದ್ರಿ ಬೀಡು ಬಳಿಯ ನಿವಾಸಿ ಚೇತನ್‌ನನ್ನು 2011ರಲ್ಲಿ ವಿವಾಹವಾಗಿದ್ದ ಮಮತಾ ಅವರಿಗೆ ಪತಿ ಸತತವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದ. ಈ ಕುರಿತಾಗಿ ಆಕೆ ತಮ್ಮ ತಾಯಿ, ಅಕ್ಕ ಹಾಗೂ ಅಣ್ಣನವರಲ್ಲಿ ಹೇಳಿಕೊಳ್ಳುತ್ತಿದ್ದಳು. ಗುರುವಾರ ಕೂಡಾ ಚೇತನ್‌, ತನ್ನ ಪತ್ನಿ ಮಮತಾ ಹಣ ಕದ್ದಿರುವುದಾಗಿ ಆಪಾದನೆಗಳನ್ನು ಹೊರಿಸಿ ಆಕೆಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದನ್ನು ಬೆಳಗ್ಗೆಯೇ ಅಣ್ಣನವರಿಗೆ ಮೊಬೈಲ್‌ ಕರೆ ಮಾಡಿ ಮಮತಾ ಹೇಳಿಕೊಂಡಿದ್ದರು. ಸಂಜೆಯ ವೇಳೆಗೆ ಅಡುಗೆ ಮನೆಯಲ್ಲಿನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಬಗ್ಗೆ ಮೃತ ಮಮತಾ ಅವರ ಸಹೋದರ ನೀಡಿದ ಸಂಶಯಾಸ್ಪದ ಸಾವಿನ ದೂರಿನಂತೆ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿ ಮಮತಾ ಪತಿ ಚೇತನ್‌ ಕುಮಾರ್‌ನನ್ನು ಬಂಧಿಸಿದ್ದಾರೆ.

Latest Indian news

Popular Stories