ಪೆರ್ಡೂರು: ಪತ್ನಿಗೆ ಚೂರಿಯಿಂದ ಇರಿದು ಕೊಲೆ ಯತ್ನ; ಗಂಡನ ವಿರುದ್ಧ ದೂರು ದಾಖಲು

ಹೆಬ್ರಿ : ಪೆರ್ಡೂರು ಗ್ರಾಮದ ವಡ್ಡಮೇಶ್ವರ ಎಂಬಲ್ಲಿ ಗಂಡನೋರ್ವ ಹೆಂಡತಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಜ. 17ರಂದು ನಡೆದಿದೆ.

ಸ್ಥಳೀಯ ನಿವಾಸಿ ಬೇಬಿ (39) ಹಲ್ಲೆಗೊಳಗಾದವರು. ಮಂಗಳವಾರ ರಾತ್ರಿ 8.20ರ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಬೇಬಿಯವರಿಗೆ ಅವರ ಗಂಡ ಶೇಖರ ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಹಲ್ಲೆ ಮಾಡಿದ್ದಲ್ಲದೇ, ಚೂರಿಯಿಂದ ಮುಖಕ್ಕೆ ಹಾಗೂ ಭುಜಕ್ಕೆ ಇರಿದು ತೀವ್ರ ತರದ ಗಾಯವನ್ನುಂಟು ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಬೇಬಿ ಅವರು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories