ಉಡುಪಿ: ಪ್ರಮೋದ್ ಮಧ್ವರಾಜ್ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಹೋದ್ರು ಆದರೆ ಯಾವ ಕಾರ್ಯಕರ್ತರು ಅವರ ಹಿಂದೆ ಹೋಗಿಲ್ಲ ಅದಕ್ಕೆ ಕೃತಜ್ಞತೆ. ಅವರ ತಂದೆ, ತಾಯಿ ಶಾಸಕರಾಗಿದ್ದರು ಇನ್ನೇನು ಅವರಿಗೆ ಕೊಡಲು ಸಾಧ್ಯವಿಲ್ಲ. ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದರೆ ಜಿಲ್ಲೆಯ ಮಹಾ ಜನತೆ ಪ್ರಮೋದ್’ರನ್ನು ಸೋಲಿಸಬೇಕೆಂದು ಡಿಕೆ ಶಿವ ಕುಮಾರ್ ಕರೆ ನೀಡಿದರು.
ಕಾಂಗ್ರೆಸ್ ಬ್ಯಾಂಕ್, ಬಂದರುಗಳನ್ನು ರಾಷ್ಟ್ರೀಕರಣ ಮಾಡಿದರೆ ಬಿಜೆಪಿ ಖಾಸಗೀಕರಣ ಮಾಡಿ ಮಾರುತ್ತಿದೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಸುಳ್ಳು ಹೇಳಿದರು. ಎರಡು ಕೋಟಿ ಉದ್ಯೋಗ,ಮೀನುಗಾರರಿಗೆ ಸೀಮೆಎಣ್ಣೆ ಕೊಡಲು ಬಿಜೆಪಿ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ಶೋಭಾ ಕರಂದ್ಲಾಜೆ, ಬೊಮ್ಮಾಯಿ, ಸದಾನಂದ ಗೌಡ ಅವರಿಗೆ ಪ್ರಶ್ನಿಸುತ್ತಿದ್ದೇನೆ, ಗ್ಲೊಬಲ್ ಬಿಸಿನೆಸ್ ಸಮ್ಮೀಟ್ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ ಎನ್ನುತ್ತಾರೆ ಆದರೆ ಕರಾವಳಿ ಭಾಗಕ್ಕೆ ಎಷ್ಟು ಬಂಡವಾಳ ಬಂದಿದೆ ಎಂದು ಪ್ರಶ್ನಿಸಿದರು. ಇವತ್ತು ಕೋಮುವಾದದ ಕಾರಣ ಬೇರೆ ಪ್ರದೇಶದಿಂದ ಜನ ಶಿಕ್ಷಣ ಪಡೆಯಲು ಇಲ್ಲಿಗೆ ಬರದಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದರು.
ನಿಮ್ಮ ಡಬಲ್ ಇಂಜಿನ್ ಸರಕಾರ ಇನ್ನು ಸಾಕು.ಜನ ಬೆಲೆ ಏರಿಕೆ ಯಿಂದ ತತ್ತರಿಸಿದ್ದಾರೆ. ಕರ್ನಾಟಕ ಬಿಜೆಪಿ ಸರಕಾರ 40% ಕಮಿಷನ್ ಸರಕಾರವೆಂಬ ಬ್ರ್ಯಾಂಡ್ ಮಾಡಿಕೊಂಡಿದೆ ಎಂದು ವ್ಯಂಗ್ಯ ಮಾಡಿದರು.