ಉಡುಪಿ: ಕಾಂಗ್ರೆಸ್’ನಿಂದ ಬಿಜೆಪಿಗೆ ಹಾರಿದ ಮಾಜಿ ಸಚಿವರ ರಾಜಕೀಯ ಹಾದಿ ಸುಲಭವೇ ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಗಳು ಇದೀಗ ನಡೆಯುತ್ತಿದೆ.
ಪ್ರಮೋದರಿಗೆ ಬಿಜೆಪಿಯಲ್ಲಿ ಯಾವ ಸ್ಥಾನ ಸಿಗಬಹುದು? ಎಂಬುವುದು ಸದ್ಯದ ಎಲ್ಲರ ಕುತೂಹಲ. ಮೊಗವೀರ ಸಮುದಾಯವನ್ನು ಪ್ರತಿನಿಧಿಸುವ ಪ್ರಮೋದ್ ಮಧ್ವರಾಜ್ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುತ್ತಾರೆಯೇ? ಎಂಬುವುದು ಸದ್ಯದ ಪ್ರಶ್ನೆ.
ಉಡುಪಿ ಜಿಲ್ಲೆಯ ಮಟ್ಟಿಗೆ ಎಲ್ಲ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಪ್ರಮೋದರಿಗೆ ಟಿಕೆಟ್ ಕೊಡುವುದಾದರೆ ಯಾವ ಕ್ಷೇತ್ರದಲ್ಲಿ ಎಂಬ ಕುತೂಹಲ ಮೂಡಿಯೇ ಮೂಡುತ್ತದೆ. ಕಾಪು ಕ್ಷೇತ್ರದಲ್ಲಿ ಕೊಡುವ ಸಾಧ್ಯತೆಯ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿ ಉಡುಪಿಯ ಬಿಜೆಪಿಯ ಇಬ್ಬರು ಪ್ರಭಾವಿ ಮುಖಂಡರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಕುರಿತು ಚರ್ಚೆಯಾಗುತ್ತಿದೆ.
ಈ ಎಲ್ಲ ಸಾಧ್ಯತೆಯ ಹೊರತಾಗಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ಗೆ ಪ್ರಯತ್ನಿಸಬಹುದು. ಇವೆಲ್ಲ ಆಗದಿದ್ದರೆ ವಿಧಾನ ಪರಿಷತ್, ರಾಜ್ಯಸಭಾ ಟಿಕೆಟ್ ಸಿಗಬಹುದು ಎಂಬುದು ಕೊನೆಯ ಸಾಧ್ಯತೆ. ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಲಿದೆ. ಆದರೆ ಪ್ರಸ್ತುತ ಕಾಂಗ್ರೆಸ್’ನಂತೆ ಪ್ರಮೋದ್ ಅವರಿಗೆ ಬಿಜೆಪಿಯಲ್ಲಿ ಹಾದಿ ಸುಲಭವಿಲ್ಲ ಎಂಬುವುದು ವಾಸ್ತವ