ಉಡುಪಿ: ಬ್ರಹ್ಮಾವರ ಕಾಂಗ್ರೆಸ್ ನಾಯಕನ ಪುತ್ರ ಎನ್ಐಎ ವಶಕ್ಕೆ: ಕಾಂಗ್ರೆಸ್’ನ ನಿಲುವು ಬಹಿರಂಗ ಪಡಿಸಿ ಎಂದು ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ತಾಜುದ್ದೀನ್ ಶೇಖ್ ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್ ಹುದ್ದೆಯ ಪ್ರಮೋಶನ್ ನೀಡುವುದೇ ಅಥವಾ ಉಚ್ಚಾಟನೆ ಮಾಡುತ್ತಾ…? ಎಂದು ಸವಾಲೆಸೆದಿದ್ದಾರೆ. ಪ್ರಧಾನ ಕಾರ್ಯದರ್ಶಿಯ ಮಗನೊಬ್ಬ ಭಯೋತ್ಪಾದಕ ಚಟುವಟಿಕೆಯಲ್ಲಿರುದರ ಕುರಿತು ಕಾಂಗ್ರೆಸ್ ವಿವರಣೆ ನೀಡಬೇಕು ಎಂದು ಹೇಳಿದರು.
ಎನ್.ಐ.ಎ ದಾಖಲೆಗಳಿಲ್ಲದೆ ಬಂಧಿಸುವುದಿಲ್ಲ. ಅವರ ಬಳಿ ಸಾಕಷ್ಟು ದಾಖಲೆಗಳಿವೆ. ಕಾಂಗ್ರೆಸ್ ಈ ಕುರಿತು ಕಠಿಣ ಕ್ರಮ ಕೈಗೊಳ್ಳುತ್ತದೆಯೋ? ಅಥವಾ ಮೃದು ಧೋರಣೆ ಹೊಂದಲಿದೆಯೇ ಎಂದು ಪ್ರಶ್ನಿಸಿದ್ದಾರೆ. ಕುಟುಂಬದ ಹಿನ್ನಲೆ ನೋಡಿದ್ರು ಭಯವಾಗುತ್ತದೆ. ವಾರಂಬಳ್ಳಿ ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದರು.