ಉಡುಪಿ: ಬಿಜೆಪಿ ಸ್ವಂತ ಶಕ್ತಿಯಲ್ಲಿ ಅಧಿಕಾರಕ್ಕೆ ಬಂದಿಲ್ಲ. ಅಪರೇಷನ್ ಕಮಲ ಮಾಡಿ ಅಭಿವೃದ್ಧಿ ಜಪ ಮಾಡಿದ್ರು, ಆದರೆ ಅದು ಸಾಧ್ಯವಾಗಿಲ್ಲ. ಬಿಜೆಪಿಯನ್ನು ಜನ ಯಾವತ್ತೂ ಆರಿಸಿ ಕಳುಹಿಸಿಲ್ಲ. ಇದೀಗ ಪ್ರಜಾಧ್ವನಿ ಮುಖೇನ ಜನರಿಗೆ ಮನವರಿಕೆ ಮಾಡಿಸುವ ಪ್ರಯತ್ನ ಸಾಗುತ್ತಿದೆ. ಜನ ಸ್ಪಂದಿಸಿ ನಮ್ಮ ಯಾತ್ರೆಗೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿಕೆ ಹರಿ ಪ್ರಸಾದ್ ಹೇಳಿದರು.
ಅವರು ಉಡುಪಿಯಲ್ಲಿ ಪ್ರಜಾ ಧ್ವನಿ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜನ ಸರಕಾರಿ ಉದ್ಯೋಗಕ್ಕೆ ಕಾಯದೆ ಕೊಡದೆ ಸ್ವಂತವಾಗಿ ದುಡಿದು ಸ್ವಾಭಿಮಾನವಾಗಿ ಬದುಕುವವರು. ಕರಾವಳಿಯ ಜಿಲ್ಲೆಯ ಆಹಾರ, ತಿಂಡಿ ತಿನಿಸುಗಳು ನರೇಂದ್ರ ಮೋದಿಯ ತರ ಮಾರ್ಕೆಟಿಂಗ್ ಮಾಡಿ ಪ್ರಸಿದ್ಧವಾಗಿಲ್ಲ. ಬದಲಾಗಿ ಜನರ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.
ನಳಿನ್ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡುವುದನ್ನು ಬಿಟ್ಟು ವಿಧೂಷಕರಾಗಿ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳನ್ನು ಬಿಟ್ಟು ಬೇರೆಯವರ ಮಕ್ಕಳನ್ನು ಬಲಿ ಪಡೆದು ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ ಎಂದರು.
ಸಾಧ್ವಿ ಪ್ರಜ್ಞಾ ಠಾಕೂರ್ ಒರ್ವ ಭಯೋತ್ಪಾದಕಿ ಶಿಕ್ಷಣ ಕೊಡಿ ಹೇಳುವುದನ್ನು ಬಿಟ್ಟು ಚಾಕು, ಚೂರಿ ಮೊನಚು ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರೇ ನೀವು ನಮ್ಮ ಮಕ್ಕಳನ್ನು ಭಯೋತ್ಪಾಕರನ್ನಾಗಿ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಅವಿಭಾಜ್ಯ ದಕ್ಷಿಣದ ಕನ್ನಡ ಜಿಲ್ಲೆಯನ್ನು ಕೋಮುವಾದದ ಪ್ರಯೋಗ ಶಾಲೆ ಮಾಡಿದ್ದಾರೆ. ಅವರಿಗೆ ಈ ಜಿಲ್ಲೆ ಮುಂದುವರಿಯುವುದು ಇಷ್ಟವಿಲ್ಲ ಆ ಕಾರಣಕ್ಕಾಗಿ ಈ ರೀತಿಯ ವರ್ತನೆ ಮಾಡುತ್ತಿದ್ದಾರೆ ಎಂದು ಬಿಜೆಪಿಯನ್ನು ಟಕಿಸಿದರು.
ಈ ರಾಜ್ಯದ ಮುಖ್ಯಮಂತ್ರಿ ಆರ್.ಎಸ್.ಎಸ್ ಮುಖ್ಯ ಮಂತ್ರಿಯಲ್ಲ. ಕೊಲೆಯಾದ ನೆಟ್ಟಾರು ಮನೆಗೆ ಹೋಗಿ 25 ಲಕ್ಷ ನೀಡುವ ಇವರು ಸುರತ್ಕಲ್ ನಲ್ಲಿ ಕೊಲೆಯಾದವರ ಮನೆಗೆ ಹೋಗುವುದಿಲ್ಲ. ಇವರ ಸೂತ್ರಧಾರಿಗಳು ಕೇಶವಕೃಪದಲ್ಲಿ ಅಥವಾ ನಾಗುಪುರಲ್ಲಿದ್ದಾರೆ. ಇವರು ಅವರ ಪಾತ್ರಧಾರಿಗಳು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಕ್ತದೋಕುಳಿ ಆಗಿ ಹೋಗಿದೆ ಇದನ್ನು ನಿಲ್ಲಿಸಿ. ತಲವಾರು, ಚಾಕು-ಚೂರಿ ಕೊಡುವ ಬದಲು ಪೆನ್ನು, ಕಾಗದ, ಪೆನ್ಸಿಲ್ ಕೊಡಿ ಎಂದು ಕರೆ ನೀಡಿದರು.