ಮಣಿಪಾಲ: ಪತ್ನಿ ಅಗಲಿಕೆ ಚಿಂತೆ: ಮಣಿಪಾಲ‌ ಎಂಐಟಿ ಅಟೆಂಡರ್‌ ಆತ್ಮಹತ್ಯೆ

ಮಣಿಪಾಲ: ಹೆಂಡತಿ ಅಗಲಿದ ಚಿಂತೆಯಲ್ಲಿ‌ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಎಂಐಟಿಯಲ್ಲಿ ನಡೆದಿದೆ.

ಮೃತರನ್ನು‌ ಅಲೆವೂರಿನ ಮೂಡುಅಲೆವೂರು ಗ್ರಾಮದ ನಿವಾಸಿ ಕೃಷ್ಣಾನಂದ ಶೆಣೈ (50) ಎಂದು ಗುರುತಿಸಲಾಗಿದೆ. ಮಣಿಪಾಲ ಎಮ್‌ಐಟಿಯಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಅಟೆಂಡರ್‌ಆಗಿ ಕೆಲಸ ಮಾಡಿಕೊಂಡಿದ್ದರು. 8 ತಿಂಗಳ ಹಿಂದೆ ಇವರ ಹೆಂಡತಿ ಮೃತಪಟ್ಟಿದ್ದರು. ಆ ಬಳಿಕ ಕೃಷ್ಣಾನಂದ ಶೆಣೈ ಅವರು  ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಚಿಂತೆಯಲ್ಲಿ ಫೆ.14ರಂದು ತಾನು ಕೆಲಸ ಮಾಡುವ ಎಮ್‌ಐಟಿಯ ಎಬಿ -1 ಬ್ಲಾಕ್‌ನ 2 ನೇ ಮಹಡಿ ರೂಮ್ ನಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories