ಮಣಿಪುರದಲ್ಲಿ ರಾಷ್ಟ್ರಪತಿಗಳು ಹಸ್ತಕ್ಷೇಪ ಮಾಡಿ ಶಾಂತಿ ಕಾಪಾಡಿ – ವೆಲ್ಫೇರ್ ಪಾರ್ಟಿ ಮನವಿ

ಈಶಾನ್ಯ ರಾಜ್ಯ ಮಣಿಪುರದಲ್ಲಿ ಕಳೆದ ಎರಡೂವರೆ ತಿಂಗಳಿಂದ ಹಿಂಸಾಚಾರ ನಡೆಯುತ್ತಲೇ ಇದೇ, ಈ ಹಿಂಸಾಚಾರದಿಂದ 200 ಕ್ಕಿಂತಲೂ ಅಧಿಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ನಾಗರಿಕರು ಗಾಯಗೊಂಡಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಸುಮಾರು 6000 ಕಿಂತ ಹೆಚ್ಚು ನಾಗರಿಕರು ತಮ್ಮ ಪ್ರಾಣ ರಕ್ಷಣೆಗೆ ವಲಸೆ ಹೋಗಿದ್ದಾರೆ ಮತ್ತು ಸುರು ಇಲ್ಲದೆ ರಸ್ತೆಗಳ ಮೇಲೆ, ಕಾಡುಗಳಲ್ಲಿ ಜೀವನ ಕಳೆಯುತ್ತಿದ್ದಾರೆ.


ಇದರ ಮಧ್ಯ ಮಹಿಳೆಯರ ಮೇಲೆ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಲೇ ಇದೇ,ಒಂದು ಮಹಿಳೆಗೆ ಮುಖದ ಮೇಲೆ ಗುಂಡಿಟ್ಟು ಕೊಲ್ಲಲಾಗಿದೆ,ಇನ್ನೊಂದು ಕಡೆ ಇಡೀ ದೇಶವೆ ತಲೆತಗಿಸುವ ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಬೆತ್ತಲೆ ಗೊಳಿಸಿ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ವೆಸಗಲಾದ ವರದಿ ಸಾಮಾಜಿಕತಾಣಗಳಲ್ಲಿ ವರದಿಯಾಗಿದೆ ಮತ್ತು ಅಂದೇ ಇನ್ಮಿಬ್ಬರು ಮಹಿಳೆಯರನ್ನು ಅತ್ಯಾಚಾರಗೈದು ಹತ್ಯೆ ಮಾಡಲಾಗಿದೆ. ಇದು ಇಡೀ ಮಾನವಕುಲ ತಲೆ ತಗ್ಗಿಸುವ ಘಟನೆಯಾಗಿದೆ.


ಮಣಿಪುರದಲ್ಲಿ ಕಾನೂನ್ ಸುವ್ಯವಸ್ತ್ಯೆ ಸಂಪೂರ್ಣ ಹದಗೆಟ್ಟಿದೆ, ರಾಜ್ಯ ಸರಕಾರ ಜನರ ಜೀವ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ಪರೋಕ್ಷವಾಗಿ ಅತ್ಯಾಚಾರಿಗಳಿಗೆ ,ಕೊಲೆಗಡುಕರಿಗೆ ಮತ್ತು ದರೋಡೆಕೋರರಿಗೆ ಬೆಂಬಲಿಸುತ್ತಿದೇಯಾ ಎಂಬ ಅನುಮಾನ ಮೂಡುತ್ತಿದೆ.


ಆದ್ದರಿಂದ ಗೌರವಾನ್ವಿತ ರಾಷ್ಟಪತಿಗಳಾದ ತಾವು ಇನ್ನಾದರೂ ಕೂಡಲೇ ಹಸ್ತಕ್ಷೇಪಮಾಡಿ ಮಣಿಪುರದಲ್ಲಿ ಶಾಂತಿ ಮತ್ತು ನೆಮ್ಮದಿಯ ಬದುಕಿಗಾಗಿ ಈ ಕ್ರಮಗಳನ್ನು ಜಾರಿಗೆ ತರಬೇಕಾಗಿ ವಿನಂತಿ.

  1. ಮಣಿಪುರ ಸರಕಾರ ತನ್ನ ನಾಗರಿಕರ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ,ಅದುದ್ದರಿಂದ ಈ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಬೇಕು.
  2. ಮಹಿಳೆಯರಿಗೆ ಬೆತ್ತಲೆ ಗೊಳಿಸಿ ಹೀನಾಯ ಕೃತ್ಯ ಎಸಗಿದ ವ್ಯಕ್ತಿಗಳಿಗೆ ಕೂಡಲೇ ಬಂಧಿಸಬೇಕು ಮತ್ತು ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು.
  3. ಸಂತ್ರಸ್ತ ಮಹಿಳೆಯರಿಗೆ ವಿಶೇಷ ರಕ್ಷಣೆ ವದಗಿಸಬೇಕು.
  4. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವ ಸಂಧರ್ಭದಲ್ಲಿ ಅವರಿಗೆ ರಕ್ಷಣೆ ನೀಡುವ ಬದಲು ಮೂಕ ಪ್ರೇಕ್ಷಕರಾಗಿದ್ದ ಪೊಲೀಸ್ ಸಿಬಂದಿಗಳಿಗೆ ವಜಾ ಗೊಳಿಸಬೇಕು.
  5. ಈ ಘಟನೆಯ ಪಾರದರ್ಶಕ ತನಿಖೆ ನಡೆಸಬೇಕು.
  6. ಮಣಿಪುರದಲ್ಲಿ ಹಿಂಸಚಾರ ಕೂಡಲೇ ನಿಲಿಸಬೇಕು ಅದಕ್ಕೆ ಸಂಭಂದಿಸಿದಂತೆ ಅಲ್ಲಿನ ಜನರನ್ನು ವಿಶ್ವಾಸಕ್ಕೆ ಪಡೆದು ಸಮಸ್ಯೆಯನ್ನು ಕೂಡಲೇ ಬಗೆದರಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ,ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ .ಉಡುಪಿ ಜಿಲ್ಲಾಧಿಕಾರಿ ಡಾ!! ಕೆ ವಿಧ್ಯಾಕುಮಾರಿಯವರ ಮೂಲಕ ರಾಷ್ಟ್ರ ಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ನಿಯೋಗದಲ್ಲಿ ಜಿಲ್ಲಾ ಉಪಾಧ್ಯಕ್ಷ ವಿಜಯ ,ಮಾಜಿ ಜಿಲ್ಲಾ ಉಪಾಧ್ಯಕ್ಷ, ಶಹಜಹಾನ್ ತೋನ್ಸೆ, ಮಾಜಿ ಜಿಲ್ಲಾಧ್ಯಕ್ಣ ಅನ್ವರ್ ಅಲಿ ಕಾಪು ಉಪಸ್ದಿತರಿದ್ದರು.

Latest Indian news

Popular Stories