ಮಲ್ಪೆ:ರಜತ ಉಡುಪಿ- ಬೀಚ್ ಉತ್ಸವ ಉದ್ಘಾಟನೆ

ಉಡುಪಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಜತ ಉಡುಪಿ- ಬೀಚ್ ಉತ್ಸವ ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿ ದರು.

IMG 20230121 WA0005 Udupi

ಜಿಲ್ಲೆಯಲ್ಲಿ 25 ವರ್ಷದ ಹಿಂದಿನಿಂದ ಇಂದಿನವರೆಗೆ ಆದ ಅಭಿವೃದ್ಧಿ ಹಾಗೂ ಮುಂದಿನ ಅಭಿವೃದ್ದಿ ಬಗ್ಗೆ ನಡೆದ ದೂರದೃಷ್ಟಿ ಕಾರ್ಯಕ್ರಮ ದ ಉದ್ದೇಶದಂತೆ , ಮುಂದಿನ ಪೀಳಿಗೆಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮತ್ತು
ಮೂಲಭೂತ ಸೌಕರ್ಯ ಅಗಬೇಕು. ಪ್ರವಾಸ ಉದ್ಯಮ ಇನ್ನಷ್ಟು ಅಭಿವೃದ್ದಿಗೊಳ್ಳಲಿ. ಸಾಮಾನ್ಯ ನಾಗರೀಕರು ತಮ್ಮ ಸಮಸ್ಯೆಗಳ ಬಗ್ಗೆ ಪತ್ರ ಮೂಲಕ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಶಾಸಕ ರಘುಪತಿ ಭಟ್, ರಜತ ಉತ್ಸವ ದ ಅವಧಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಜಿಲ್ಲೆಯು ಮುಂದಿನ 25 ವರ್ಷಗಳ ಅಭಿವೃದ್ಧಿ ಕುರಿತು ಯೋಜನೆ ತಯಾರಿಸಿದೆ.
ಪ್ರವಾದೊದ್ಯಮ ವನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಲಾಗಿದೆ.
ಬೀಚ್ ಉತ್ಸವ ದ ಪ್ರಯುಕ್ತ ನಿಯೋನ್ ಲೈಟಿಂಗ್, ಫ್ಲೈ ಬೋರ್ಡ್, , ಐಲ್ಯಾಂಡ್ ನಲ್ಲಿ ಕ್ಲಿಪ್ ಡ್ರೈವ್ , ಯಾಟ್ ಸೇವೆ,ಸ್ಕ್ಯೂಬಾ ಡ್ರೈವ್ ಆರಂಭಗೊಳ್ಳಲಿದೆ. ಒಪೆನ್ ಸೀ ವಾಟರ್ ಈಜು ಸ್ಪರ್ಧೆ, ಜನರಲ್ ತಿಮ್ಮಯ್ಯ ಅಕಾಡೆಮಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕಯಾಕಿಂಗ್ , ಮಹಿಳೆಯರ ತ್ರೌಬಾಲ್, ಚಿತ್ರಕಲಾ ಶಿಬಿರ, ಪ್ರೇಕ್ಷನಿಯ ಸ್ಥಳಗಳ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ಜಿ. ಪಂ. ಸಿಇಒ ಪ್ರಸನ್ನ ಹೆಚ್, ಎಸ್ಪಿ ಹಾಕ್ ಅಕ್ಷಯ್ ಮಚ್ಚಿಇಂದ್ರ, ತರಬೇತಿ ನಿರತ ಜಿಲ್ಲಾಧಿಕಾರಿ ಯತೀಶ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ವೀಣಾ ವಂದಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ನಿರೂಪಿಸಿದರು.
ಬೀಚ್ ನಲ್ಲಿ ಫ್ಲೈ ಬೋರ್ಡ್, ಚಿತ್ರಕಲಾ ಸ್ಪರ್ಧೆ, ಆಹಾರ ಮೇಳ, ಸಮುದ್ರ ಮಧ್ಯ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೋಟ್ ಆಕರ್ಷಕ ವಾಗಿತ್ತು.

Latest Indian news

Popular Stories