ಉಡುಪಿ, ಎ.20: ಮಲ್ಪೆ ಬೀಚ್ ನಿರ್ವಾಹಣಾ ಗುತ್ತಿಗೆದಾರ ಸುದೇಶ್ ಶೆಟ್ಟಿ ಮನೆ ಹಾಗೂ ಗಳ ಮೇಲೆ ಇಡಿ ಅಧಿಕಾರಿಗಳ ತಂಡ ಎ.19ರಂದು ಏಕಕಾಲದಲ್ಲಿ ದಾಳಿ ನಡೆಸಿದೆ.
ಡಯಲ್ ಸಂಸ್ಥೆಯ ಮಾಲಕರಾಗಿರುವ ಸುದೇಶ್ ಶೆಟ್ಟಿ ನಿರ್ವಹಿಸುತ್ತಿರುವ ಮಲ್ಪೆ ಬೀಚ್ನಲ್ಲಿರುವ ಗೆಸ್ಟ್ ಹೌಸ್ ಕಚೇರಿ, ರೆಸ್ಟೋರೆಂಟ್, ಅಂಗಡಿ ಹಾಗೂ ಮನೆ ಮತ್ತು ಇತರ ಕಡೆಗಳಿಗೆ 10ರಿಂದ 12 ಮಂದಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಬೆಳಗ್ಗೆಯಿಂದ ಸಂಜೆಯವರೆಗೆ ಪರಿಶೀಲನೆ ನಡೆಸಿ ಎಲ್ಲ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ