ಮಲ್ಪೆ: ಕರ್ನಾಟಕ ರಾಜ್ಯ ಹಜ್ ಕಮಿಟಿ ವತಿಯಿಂದ ಮಲ್ಪೆಯ ಅಬೂಬಕ್ಕರ್ ಸಿದ್ಧೀಕಿ ಜಾಮೀಯ ಮಸೀದಿ ಹಾಗೂ ಉಡುಪಿ ದಾರುಲ್ ಹುದಾ ಇದರ ಸಹಯೋಗದೊಂದಿಗೆ ಈ ಬಾರಿ ಹಜ್ ಯಾತ್ರೆ ಮಾಡುವ ಯಾತ್ರಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಮಸೀದಿಯಲ್ಲಿ ಇಂದು ಆಯೋಜಿಸಲಾಗಿತ್ತು.
ಉಡುಪಿ ಜಿಲ್ಲಾಡಳಿತದ ನಿರ್ದೇಶನದಂತೆ ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಡುಪಿ ನಗರ ಆರೋಗ್ಯ ಕೇಂದ್ರದಿಂದ ಜಿಲ್ಲೆಯ ಒಟ್ಟು 63 ಯಾತ್ರಾರ್ಥಿಗಳಿಗೆ ಲಸಿಕೆ ನೀಡಲಾಯಿತು. ಈ ಸಂದರ್ಭ ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ರಾಮ ಎಂ.ಜಿ., ಡಾ.ಲತಾ ನಾಯಕ್, ಮಲ್ಪೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜೇಷ್ಮಾ ಹಾಜರಿದ್ದರು.
ಡಾ.ಫರ್ವೇಝ್ ಮದನಿ ಲಸಿಕೆ ಕುರಿತು ಉರ್ದುವಿನಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಹಜ್ ಕಮಿಟಿ ಅಧ್ಯಕ್ಷ ಮುಹಮ್ಮದ್ ರಫೂದ್ದೀನ್, ಸದಸ್ಯ ಹನೀಫ್, ಮಸೀದಿ ಅಧ್ಯಕ್ಷ ಯಹ್ಯಾ ನಕ್ವಾ, ಕಮಿಟಿ ಅಧಿಕಾರಿ ಫೈರೋಜ್ ಮೊದಲಾದ ವರು ಉಪಸ್ಥಿತರಿದ್ದರು.