ಮಹಿಳೆ, ಬಾಲಕಿಯರ ಮೇಲಿನ ದೌರ್ಜನ್ಯ ತಡೆಗೆ ಶ್ರಮಿಸಿ: ಯಡಹಳ್ಳಿ ಕರೆ

ವಿಜಯಪುರ : ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣ ಹಾಗೂ ಅಂತರ್ಜಾಲವನ್ನು ಅತ್ಯಂತ ಜಾಗರೂಕತೆಯಿಂದ ಬಳಸಬೇಕು ಎಂದು ಮನಶಾಸ್ತç ಪ್ರಾಧ್ಯಾಪಕ ಡಾ.ಎಚ್.ಕೆ. ಯಡಹಳ್ಳಿ ಹೇಳಿದರು.


ವಿಜಯಪುರ ನಗರದ ಸಿಕ್ಯಾಬ ಬಾಲಕರ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ `ಪೋಕ್ಸೊ ಕಾಯ್ದೆ ಮತ್ತು ಅರಿವು’ ಎಂಬ ವಿಷಯಾಧಾರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಮಹಿಳೆ, ಬಾಲಕಿಯರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಆಘಾತಕಾರಿ ಸಂಗತಿ, ಈ ದೌರ್ಜನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬರು ಶ್ರಮಿಸಬೇಕು, ಈ ದೌರ್ಜನ್ಯ ತಡೆಗಟ್ಟಲು ಕಠಿಣವಾದ ಪೋಕ್ಸೋ ಕಾಯ್ದೆ ರೂಪಿಸಲಾಗಿದೆ ಎಂದರು.
ಮಕ್ಕಳ ಮೇಲಿನ ದೌರ್ಜನ್ಯವನ್ನು ವರದಿ ಮಾಡಲು ಪೋಕ್ಸೊ ಕಾಯ್ದೆಯಲ್ಲಿ ಯಾವುದೇ ಸಮಯದ ಮಿತಿ ಒದಗಿಸಿರುವುದಿಲ್ಲ. ಸಂತ್ರಸ್ತರು ಯಾವುದೇ ಸಂದರ್ಭದಲ್ಲಿ ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಂಬಂಧಿಸಿದವರಿಗೆ ದೂರನ್ನು ಸಲ್ಲಿಸಬಹುದು. ಕೋರೋನಾ ನಂತರದ ದಿನಗಳಲ್ಲಿ ದೌರ್ಜನ್ಯ ಪ್ರಮಾಣ ಹೆಚ್ಚುತ್ತಿರುವುದು ಅತ್ಯಂತ ನೋವಿನ ಸಂಗತಿ. ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವಿಲೇವಾರಿ ಮಾಡಲು ಆನ್ಲೈನ್ ದೂರು ನಿರ್ವಹಣಾ ವ್ಯವಸ್ಥೆ ಕೂಡ ಇದೆ ಎಂದು ತಾಂತ್ರಿಕ ವಿವರಣೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎನ್.ಎಸ್. ಭೂಸನೂರ ಮಾತನಾಡಿ, ಪೋಕ್ಸೊ ಕಾಯ್ದೆಯಡಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಿಗೆ ಅಪರಾಧಕ್ಕೆ ತಕ್ಕಂತೆ ಶಿಕ್ಷಯ ಸ್ವರೂಪ ಭಿನ್ನವಾಗಿದೆ. ಮತ್ತು ಈ ರಕ್ಷಣಾ ಕಾಯ್ದೆ ಬಲಪಡಿಸಲಾಗಿದೆ. ಇದರ ಕುರಿತು ಸೂಕ್ತ ತಿಳವಳಿಕೆ ಅಗತ್ಯ ಎಂದರು.


ಸಮಾಜಶಾಸ್ತç ಉಪನ್ಯಾಸಕ ಎ.ಎನ್.ರಿಸಾಲದಾರ ಮಾತನಾಡಿದರು. ವಿಜ್ಞಾನ ವಿಭಾಗದ ಮುಖ್ಯಸ್ಥೆ ಶ್ರೀಮತಿ ಆರ್.ಕೆ.ಕೊಕಟನುರ ಉಪಸ್ಥಿತರಿದ್ದರು.

Latest Indian news

Popular Stories