ಉಡುಪಿ: ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಗಣೇಶ ಚತುರ್ಥಿಯ ಸಂಭ್ರಮದಲ್ಲಿರುವ ಜನರಿಗೆ ಮಳೆ ತಂಪೆರಗಿದೆ.
ನಿನ್ನೆ ಸುರಿದ ಮಳೆ ಪ್ರಮಾಣ
ಉತ್ತರ ಕನ್ನಡ: 70 ಮಿ.ಮೀ
ದಕ್ಷಿಣ ಕನ್ನಡ: 62 ಮಿ.ಮೀ
ಕೋಲಾರ: 60.5 ಮಿ.ಮೀ
ಬೆಂಗಳೂರು ನಗರ: 45 ಮಿ.ಮೀ
ರಾಮನಗರ: 40.5 ಮಿ.ಮೀ
ಬೆಳಗಾವಿ: 40.5 ಮಿ.ಮೀ
ಬೆಂಗಳೂರು ಗ್ರಾಮಾಂತರ: 36.5 ಮಿ.ಮೀ
ಮೈಸೂರು: 35 ಮಿ.ಮೀ
ಉಡುಪಿ: 35 ಮಿ.ಮೀ
ಮಂಡ್ಯ: 33 ಮಿ.ಮೀ
ಬಳ್ಳಾರಿ: 33 ಮಿ.ಮೀ
ಕೊಡಗು: 31 ಮಿ.ಮೀ
ಹಾಸನ: 26 ಮಿ.ಮೀ
ಚಿಕ್ಕಮಗಳೂರು: 25.5 ಮಿ.ಮೀ