ಈಗಾಗಲೇ ಉಡುಪಿ ಜಿಲ್ಲಾ ಶ್ರೀರಾಮಸೇನೆ ಉಡುಪಿ ಮತ್ತು ಬೈಂದೂರು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಖಚಿತವೆಂದು ಈ ಹಿಂದೆ ಹೇಳಿದೆ. ಆದರೆ ಈಗ ಉಡುಪಿಗೆ ಬಿಜೆಪಿ ಅಭ್ಯರ್ಥಿಯಾಗಿ ಯಶ್ ಪಾಲ್ ಸುವರ್ಣ ಆಯ್ಕೆಯಾಗಿರುವುದರಿಂದ, ಸುವರ್ಣರಿಗೆ ಉಡುಪಿ ಜಿಲ್ಲಾ ಶ್ರೀರಾಮಸೇನೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ಪ್ರಬಲ ಹಿಂದೂ ನಾಯಕ, ಯುವಕರ ಕಣ್ಮಣಿ ಉಡುಪಿಯ ಕ್ಷೇತ್ರಕ್ಕೆ ಅಗತ್ಯವಿತ್ತು. ಅದನ್ನು ಸುವರ್ಣ ರವರು ನೀಡುತ್ತಾರೆ ಎಂಬ ದೃಢ ವಿಶ್ವಾಸದೊಂದಿಗೆ ಶ್ರೀರಾಮಸೇನೆಯಿಂದ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ( ಕಾರ್ಕಳ ಬಿಟ್ಟು ) ಯಾವುದೇ ಅಭ್ಯರ್ಥಿಗಳನ್ನು ಚುನಾವಣಾ ಸ್ಪರ್ಧೆಗೆ ಇಳಿಸಲ್ಲ ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಯರಾo ಅಂಬೆಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.