ಉಡುಪಿ/ಬೆಂಗಳೂರು: ಇಂದು ರಾಜ್ಯಾದ್ಯಂತ ಮುಸ್ಲಿಮರು ಸಂಭ್ರಮದ ಈದ್-ಉಲ್-ಅಝ್ಹಾ ಹಬ್ಬವನ್ನು ಆಚರಿಸಿದರು. ಎಲ್ಲ ಮುಸ್ಲಿಮ್ ಬಾಂಧವರು ಮುಂಜಾನೆ ಈದ್ಗಾ/ಮಸೀದಿಗೆ ಧಾವಿಸಿ ಈದ್ ನಮಾಝ್ ನಿರ್ವಹಿಸಿದರು.

ಪುರುಷರು, ಮಹಿಳೆಯರು, ಮಕ್ಕಳು ಎಲ್ಲರೂ ಹೊಸ ಬಟ್ಟೆ ಧರಿಸಿ ಮಸೀದಿಯತ್ತ ಹೋಗಿ ಪ್ರಾರ್ಥನೆ ಸಲ್ಲಿಸುವ ದೃಶ್ಯ ಕಂಡು ಬಂತು. ಪ್ರಾರ್ಥನೆಯ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರವಾದಿ ಇಬ್ರಾಹಿಮರ ತ್ಯಾಗ ಬಲಿದಾನವನ್ನು ಸ್ಮರಿಸುವ ಹಬ್ಬವಾಗಿ ಮುಸ್ಲಿಮರು ಈದ್ ಉಲ್ ಅಝ್ಹಾ ಹಬ್ಬ ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಜಾನುವಾರುಗಳನ್ನು ಬಲಿ ನೀಡಿ ಸಂಬಂಧಿಕರಿಗೆ, ಬಡವರಿಗೆ ಹಚ್ಚಿ ಹಬ್ಬವನ್ನು ಅರ್ಥಪೂರ್ಣಗೊಳಿಸಲಾಗುತ್ತದೆ.
ಈ ಬಾರಿ ಹಬ್ಬದ ಪ್ರಯುಕ್ತ ಸರಕಾರವು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತು ಕೈಗೊಂಡಿರುವುದು ಕಂಡು ಬಂತು.