ರಾಜ್ಯ ಮಟ್ಟದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉಡುಪಿ, ಕರಂಬಳ್ಳಿಯ ವರ್ಷಶ್ರೀ ಅವರು ತೇರ್ಗಡೆಯಾಗಿದ್ದಾರೆ.
ನಿವ್ರತ್ತ ಶಿಕ್ಷಕರಾದ ದಿವಾಕರ್ ಐತಾಳ್ ಮತ್ತು ನಿವ್ರತ್ತ ಶಿಕ್ಷಕಿಯಾದ ಜಯಲಕ್ಷ್ಮಿ ಅವರ ಪುತ್ರಿ ವರ್ಷಶ್ರೀ, ಗುಂಡಿಬೈಲ್ ಶಾಲೆ, ನಿಟ್ಟೂರು ಫ್ರೌಡ ಶಾಲೆ , ಉಡುಪಿ ಹೆಮ್ಮಕ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದು, ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು 2012ರಲ್ಲಿ ಪಡೆದಿದ್ದಾರೆ.
ಪ್ರಸ್ತುತ ಸರಕಾರಿ ಸಹಾಯಕ ಅಭಿಯತಂರರಾಗಿ ಕುಂದಾಪುರದಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.