ರಾಹುಲ್ ಗಾಂಧಿಯ ಜನಪ್ರಿಯತೆಗೆ ಬೆದರಿದ ಬಿಜೆಪಿ ಅವರನ್ನು ಮಟ್ಟಹಾಕಲು ನೋಡುತ್ತಿದೆ – ಅಶೋಕ್ ಕೊಡವೂರು

ಉಡುಪಿ, ಜು.12: ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಬಿಜೆಪಿ ಸರಕಾರ ಧ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಪ್ಪು ಬಟ್ಟೆ ಹಾಗೂ ಕಪ್ಪು ಪಟ್ಟಿ ಧರಿಸಿ ಇಂದು ಉಡುಪಿ ಅಜ್ಜರಕಾಡು ಭುಜಂಗಪಾರ್ಕಿನ ಗಾಂಧಿ ಕಟ್ಟೆಯ ಎದುರು ವೌನ ಪ್ರತಿಭಟನೆ ನಡೆಸಲಾಯಿತು.


ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಕ್ಷುಲ್ಲಕ ವಿಚಾರಕ್ಕಾಗಿ ಕೇಂದ್ರ ಸರಕಾರ ತನ್ನ ಕುಟೀಲ ರಾಜಕಾರಣದ ಮೂಲಕ ರಾಹುಲ್‌ಗಾಂಧಿಯನ್ನು ತೇಜೋವಧೆ ಮಾಡುತ್ತಿದೆ. ರಾಹುಲ್ ಗಾಂಧಿಯ ಜನಪ್ರಿಯತೆಗೆ ಬೆದರಿದ ಬಿಜೆಪಿ ಅವರನ್ನು ಮಟ್ಟಹಾಕಲು ನೋಡುತ್ತಿದೆ. ರಾಹುಲ್ ಗಾಂಧಿ, ಅದಾನಿ ಮತ್ತು ಮೋದಿ ಸಂಬಂಧ ಬಯಲಿಗೆ ಎಳೆದ ಕೇವಲ ಏಕೈಕ ಕಾರಣಕ್ಕಾಗಿ ಅವರ ಸದಸ್ಯತ್ವವನ್ನು ರದ್ದು ಮಾಡಿ ಕಿರುಕುಳ ಕೊಡುವ ಕಾರ್ಯ ಮಾಡುತ್ತಿದೆ. ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ರಮೇಶ್ ಕಾಂಚನ್, ವರೋನಿಕಾ ಕರ್ನೆಲಿಯೋ, ದೀಪಕ್ ಕೋಟ್ಯಾನ್, ಇಸ್ಮಾಯಿಲ್ ಆತ್ರಾಡಿ, ಹರೀಶ್ ಶೆಟ್ಟಿ ಪಾಂಗಾಳ, ವಿಶ್ವಾಸ್ ಅಮೀನ್, ಸೌರಭ್ ಬಲ್ಲಾಳ್, ಹರೀಶ್ ಕಿಣಿ, ಭಾಸ್ಕರ ರಾವ್ ಕಿದಿಯೂರು, ಕುಶಲ್ ಶೆಟ್ಟಿ, ಡಾ.ಸುನೀತಾ ಶೆಟ್ಟಿ, ಸರಳಾ ಕಾಂಚನ್, ಪ್ರಶಾಂತ್ ಜತ್ತನ್ನ, ಶಬ್ಬೀರ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು

Latest Indian news

Popular Stories