ಲಕ್ಷ್ಮೀಂದ್ರನಗರದಲ್ಲಿ ತೋಡಿಗೆ ಬಿದ್ದು ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ

ಕೂಲಿ ಕಾರ್ಮಿಕನೋರ್ವ ಆಕಸ್ಮಿಕವಾಗಿ‌ ಕಾಲುಜಾರಿ ತೋಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಇಂದ್ರಾಳಿ ಸಮೀಪದ ಲಕ್ಷ್ಮೀಂದ್ರನಗರದಲ್ಲಿ ನಡೆದಿದೆ.


ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಹುನಗುಂದ ತಾಲೂಕಿನ 44ವರ್ಷದ ಮಲ್ಲಪ್ಪ ಎಂದು ಗುರುತಿಸಲಾಗಿದೆ. ತೋಡಿಗೆ ಬಿದ್ದ ಈತನನ್ನು ಸ್ಥಳೀಯರು ಮೇಲೆತ್ತಿದರು. ಬಳಿಕ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ವಿವೇಕ್ ನಾಯ್ಕ್ ಪರ್ಕಳ, ಸ್ಥಳೀಯ ಯುವಕ ಸಹಕಾರದೊಂದಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಸಂಬಂಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ

Latest Indian news

Popular Stories