ವಿಟ್ಲ ದಲಿತ ಬಾಲಕಿಯ ಮೇಲೆ ಸಂಘಪರಿವಾರದ ಕಾರ್ಯಕರ್ತರ ಅತ್ಯಾಚಾರ; ಈ ಘಟನೆ ಹಿಂದು ಸಂಘಟನೆಗಳಿಗೆ ಕಾಣುತ್ತಿಲ್ಲವೇ? – ಶ್ಯಾಮರಾಜ್ ಬಿರ್ತಿ ಆಕ್ರೋಶ

ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಈ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಬೊಗಳೆ ಬಿಡುವ ಹಿಂದೂ ಸಂಘಪರಿವಾರದ ಕಾರ್ಯಕರ್ತರೇ ಸತತವಾಗಿ ಅತ್ಯಾಚಾರ ನಡೆಸಿದ್ದು ಅಮಾನುಷ ಮತ್ತು ಅಕ್ಷಮ್ಯ.ಈ ಅತ್ಯಾಚಾರ ಘುಟನೆಯು ಹಿಂದೂ ಸಂಘಟೆಯವರಿಗೆ ಕಾಣುತ್ತಿಲ್ಲವೇ , ಕಣ್ಣು ಕುರುಡಾಗಿದೆಯೇ, ಈ ನಮ್ಮ ದಲಿತ ಹೆಣ್ಣು ಹಸುಗೂಸು ಹಿಂದುವಲ್ಲವೇ? ಉಡುಪಿ ಕಾಲೇಜಿನ ವಿಡಿಯೋ ಪ್ರಕರಣಕ್ಕೆ ಗಂಟಲು ಹರಿಯವುವಷ್ಟು ಬೊಬ್ಬಿರಿದ ಹಿಂದೂ ಧರ್ಮ ರಕ್ಷರಿಗೆ ಈ ಅತ್ಯಾಚಾರ ಘುಟನೆ ಕ್ಷುಲ್ಲಕೋ ಅಥವಾ ಅತ್ಯಾಚಾರ ನಡೆಸಿದವರು ಮುಸ್ಲಿಂ ಧರ್ಮಕ್ಕೆ ಸೇರಿದವರಲ್ಲಾ ಎನ್ನುವ ಕಾರಣವೋ? ಅರ್ಥವಾಗುತ್ತಿಲ್ಲ ಎಂದು ಹೋರಾಟಗಾರ ಶ್ಯಾಮ್’ರಾಜ್ ಬಿರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಒಂದು ವೇಳೆ ಅತ್ಯಾಚಾರದ ಆರೋಪಿಗಳು ಮುಸ್ಲಿಮರಾಗಿದ್ದರೆ ರಣ ಹದ್ದಿನಂತೆ ಓಡೋಡೀ ಬರುವ ಶೋಬಕ್ಕನ ಸುಳಿವೇ ಇಲ್ಲ.
ಈ ಕೂಡಲೇ ಯಾರು ಹಿಂದೂ ಧರ್ಮವನ್ನು ಗುತ್ತಿಗೆ ತೆಗೆದುಕೊಂಡಹಾಗೆ ವರ್ತಿಸುವ ಸಂಘ ಪರಿವಾರದರು ಈ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೂ ಬ್ರಹತ್ತ್ ಹೋರಾಟ ನಡೆಸಬೇಕು. ಆಗ ಮಾತ್ರ ತಮ್ಮ ಅಸಲೀ ಧರ್ಮ ರಕ್ಷಣೆ ಖಾತರಿಯಾಗುತ್ತದೆ‌. ಇಲ್ಲವಾದರೆ ಬರೀ ರಾಜಕೀಯದ ತೆವಲಿಗೆ ಬಿದ್ದು ಅಧಿಕಾರ , ಪ್ರಚಾರದಾಸೆಗೆ ಮಾಡುವ ನಾಟಕವಾಗಬಹುದೆಂದು ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಆಕ್ರೋಶ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Latest Indian news

Popular Stories