ಕಲ್ಯಾಣಪುರ ಸಂತೆಕಟ್ಟೆಯ ಓವರ್ ಪಾಸ್ ಕಾಮಗಾರಿ 30-01-2023 ಸೋಮವಾರದಿಂದ ಆರಂಭಗೊಳ್ಳಲಿದ್ದು, ಮೊದಲ ಹಂತದಲ್ಲಿ ಉಡುಪಿಯಿಂದ ಬ್ರಹ್ಮಾವರಕ್ಕೆ ಹೋಗುವ ಬದಿಯ ಕಾಮಗಾರಿ ಪ್ರಾರಂಭಗೊಳ್ಳಲಿದ್ದು ಟ್ರಾಫಿಕ್ ನಿಯಂತ್ರಿಸುವ ನಿಟ್ಟಿನಲ್ಲಿ ವಾಹನ ಸವಾರರು ಆದಷ್ಟು ಬದಲಿ ಮಾರ್ಗವನ್ನು ಬಳಸಬೇಕಾಗಿ ವಿನಂತಿಸುತ್ತೇನೆ ಎಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ತಿಳಿಸಿದ್ದಾರೆ.